Published
6 months agoon
By
Akkare Newsಜೂ.16 : ಗ್ರಾಮೀಣ ಪ್ರದೇಶದ ಪ್ರತಿಷ್ಠಿತ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ನೂತನ ಮಂತ್ರಿಮಂಡಲ ರಚನೆಯಾಗಿದೆ ನೂತನ ಮಂತ್ರಿಮಂಡಲ ರಚನೆಯು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮತ್ತು ಮತದಾನದ ಅರಿವು ಮೂಡಿಸುವುದರೊಂದಿಗೆ ಚುನಾವಣಾ ಮೂಲಕ ಶಾಲಾ ನಾಯಕ ಮತ್ತು ಉಪನಾಯಕರ ಆಯ್ಕೆ ಮಾಡಲಾಯಿತು.
ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಹತ್ತನೇ ತರಗತಿಯ ವಿದ್ಯಾರ್ಥಿಯಾದ ಪ್ರತಿಕ್ . ಎನ್. ಎಸ್. ಉಪನಾಯಕಿಯಾಗಿ 9ನೇ ತರಗತಿಯ ವಿದ್ಯಾರ್ಥಿನಿಯಾದ ತನ್ಮಯಿ ಎಸ್. ಆರ್. ಆಯ್ಕೆಗೊಂಡಿರುತ್ತಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ. ಎನ್. ಚುನಾವಣೆಯ ಉಸ್ತುವಾರಿಯಾಗಿ ಸಹ ಶಿಕ್ಷಕಿಯಾದ ಶ್ರೀಮತಿ ಪ್ರಮೀಳಾ. ಹಾಗೂ ಶ್ರೀಮತಿ ಪ್ರಶಾಂತಿ ಪಿ ಅವರು ನಿರ್ವಹಿಸಿದರು