Published
6 months agoon
By
Akkare Newsಪುತ್ತೂರು: ಜನರು ನೊಂದು ನೋವಿನಲ್ಲಿ ಬರುವ ಜಾಗ ಅಂತ ಇದ್ರೆ ಅದು ಆಸ್ಪತ್ರೆ ಮತ್ತು ಪೊಲೀಸ್ ಸ್ಟೇಷನ್. ಆದರೆ ಪೊಲೀಸ್ ಠಾಣೆಗೆ ಹೆದರಿ ಹೋಗುವವರಿದ್ದಾರೆ. ಆಸ್ಪತ್ರೆಗೆ ನೋವು ತೆಗೆದು ಕೊಂಡು ಬರುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಸ್ಪಂಧನೆ ಸಿಗಬೇಕು. ಆಸ್ಪತ್ರೆಯ ಸಮಸ್ಯೆಯೂ ನನಗೆ ಗೊತ್ತಿದೆ. ಆದರೂ ನೊಂದು ಬಂದವರಿಗೆ ಮೊದಲ ಸ್ಪಂಧನೆ ನೀಡಿ ಶಾಸಕ ಅಶೋಕ್ ಕುಮಾರ್ ರೈ ಅವರು ಆಸ್ಪತ್ರೆಯ ವೈದ್ಯರುಗಳಿಗೆ ತಿಳಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಜೂ.೧೮ರಂದು ಸಂಜೆ ನಡೆದ ನೂತನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅಸ್ಪತ್ರೆಯ ಕಂದುಕೊರತೆಯ ಸಭೆ ನಡೆಸಿ ಮಾತನಾಡಿದರು. ಆಸ್ಪತ್ರೆಯ ವೈದ್ಯರನ್ನು ದೂರುವುದಿಲ್ಲ. ಅವರು ನಾಲ್ಕು ಜನ ವೈದ್ಯರ ಕೊರತೆ ಇದ್ದರೂ ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೂ ಕೆಲವೊಂದು ಪರಿಸ್ಥಿಯಲ್ಲಿ ಜನರಿಗೆ ಅರ್ಥ ಆಗದೆ ನಿಮ್ಮ ಮೇಲೆಯೇ ಕೋಪಗೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಅವರೊಂದಿಗೆ ಉತ್ತಮ ಸ್ಪಂಧನೆ ಕೊಡಿ. ಸಮಾಜದಲ್ಲಿ ಅರ್ಧ ವೈದ್ಯರ ಸಮಾಧಾನ ಮತ್ತು ಅರ್ಧ ವೈದ್ಯರು ನೀಡುವ ಔಷಧಿಯಿಂದ ರೋಗಿಯ ಖಾಯಿಲೆ ಗುಣಮುಖವಾಗುತ್ತದೆ. ಇದನ್ನು ಅರಿತು ನೀವು ಕೆಲಸ ಮಾಡಿ ಎಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿರುವುದು ಉತ್ತಮ ವಿಚಾರ. ಇದು ಗುಡ್ ಜಾಬ್ ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಗೆ ಒಟ್ಟು ರೂ. ೨ ಕೋಟಿ ಅನುದಾನ:
ಪುತ್ತೂರು ಸರಕಾರಿ ಆಸ್ಪತ್ರೆಗೆ ಒಟ್ಟು ರೂ. ೨ಕೋಟಿ ಅನುದಾನ ಬಂದಿದೆ. ಅನುದಾನ ಬೇರೆ ಬೇರೆ ರೀತಿಯಲ್ಲಿ ಬಂದಿರಬಹುದು. ಆದರೆ ನಮಗೆ ಅದು ಒಟ್ಟಾಗಿ ಕಾಣುತ್ತದೆ. ಈಗಾಗಲೇ ರೂ. ೧.೪೦ ಕೋಟಿ ಆಸ್ಪತ್ರೆಯ ಕಾಮಗಾರಿಗಳಿಗೆ ಬಂದಿದೆ. ಅದರಲ್ಲಿ ಆಸ್ಪತ್ರೆಯ ಎಲ್ಲಾ ದುರಸ್ಥಿ ಕಾರ್ಯಗಳು ನಡೆಯಬೇಕಾಗಿದೆ. ರೂ. ೫೦ ಲಕ್ಷ ಲ್ಯಾಬ್ಗೆ ಬಂದಿದೆ. ಇದರಲ್ಲಿ ಲ್ಯಾಬ್ ಪರಿಪೂರ್ಣ ಆಗಬೇಕು. ಸ್ಕ್ಯಾನಿಂಗ್ ಮೆಷಿನ್ ಖರೀದಿಸಲು ರೂ. ೨೭ ಲಕ್ಷ ಇದೆ. ರೆಡಿಯೋಲಿಜಿಸ್ಟ್ ರಾಧಿಕಾ ಅವರು ಕಂಪೆನಿಯಿಂದ ಈ ಕುರಿತು ಮಾಹಿತಿ ಪಡೆದುಕೊಳ್ಳಿ ಎಂದು ಶಾಸಕರು ಹೇಳಿದರಲ್ಲೆ ಆಸ್ಪತ್ರೆಯ ಬೇಡಿಕೆಯಂತೆ ತುರ್ತು ೫೦ ಬೆಡ್ ಹೆಚ್ಚುವರಿ ಮಾಡಲು ಪ್ರಸ್ತಾವನೆ ಕಳುಹಿಸಲು ತಿಳಿಸಿದರು.
ಪುತ್ತೂರಿಗೆ ಆಯುಷ್ ಆಸ್ಪತ್ರೆಗೆ ರೂ. ೧೫ಕೋಟಿ:
ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಗಾಗಿ ಈಗಾಗಲೇ ಎರಡು ಕಡೆ ಜಾಗ ನೋಡಿ ಅಗಿದೆ. ನಾಳೆಯೇ ಅದರ ಮುಖ್ಯ ಅಧಿಕಾರಿ ಬರುತ್ತಾರೆ. ಅದಕ್ಕೆ ಪ್ರಸ್ತಾವನೆ ತಕ್ಷಣ ಸಲ್ಲಿಸುವಕೆಲಸ ಆಗಬೇಕು. ರೂ. ೧೫ ಕೋಟಿ ಅದಕ್ಕೆ ಮಂಜೂರು ಆಗುತ್ತದೆ. ಇದರಲ್ಲಿ ೫೦ ಬೆಡ್ನ ಆಸ್ಪತ್ರೆಯೂ ಬರುತ್ತದೆ. ಮ್ಯಾನ್ ಪವರ್ ಬರುತ್ತದೆ ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ:
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮಾತನಾಡಿ ಅಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಯಲ್ಲಿ ತೊಂದರೆ ಆದಾಗ ಸಾರ್ವಜನಿಕರಿಗೆ ಸೌಮ್ಯದಿಂದ ಉತ್ತರ ಕೊಡಬೇಕಾಗುತ್ತದೆ. ಎನಾದರೂ ಸಮಸ್ಯೆ ಬಂದಾಗ ಗಮನಕ್ಕೆ ತನ್ನಿ. ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ತುರ್ತು ಸಂದರ್ಭವೂ ಲ್ಯಾಬ್ ಚಾಲಿತ:
ಆಸ್ಪತ್ರೆಯ ಲ್ಯಾಬ್ ಸಂಜೆ ಗಂಟೆ ೪.೩೦ಕ್ಕೆ ಬಂದ್ ಆಗುತ್ತದೆ. ರಾತ್ರಿ ಬಂದ ರೋಗಿಗಳಿಗೆ ಲ್ಯಾಬ್ ಸೌಲಭ್ಯ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಉತ್ತರಿಸಿದ ಆಸ್ಪತ್ರೆಯ ವೈದ್ಯಾಧಿಕಾರಿ ಲ್ಯಾಬ್ನಲ್ಲಿ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಲ್ಯಾಬ್ ಟೆಕ್ನೀಷಿಯನ್ ಕೊರತೆ ಇದೆ. ಹಾಗಾಗಿ ಸಂಜೆ ತುರ್ತು ಸಂದರ್ಭ ಅವರು ಬಂದು ಸಹಕಾರ ನೀಡುತ್ತಿದ್ದಾರೆ ಎಂದರು.
ಶವಗಾರ ಕೊಠಡಿ ಬಳಿ ದಾರಿ ದೀಪ:
ಶವಗಾರಕ್ಕೆ ಹೋಗುವ ದಾರಿಯಲ್ಲಿ ದಾರಿ ದೀಪದ ಸಮಸ್ಯೆ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಶಾಸಕರ ಗಮನಕ್ಕೆ ತಂದರು. ತಕ್ಷಣ ಶಾಸಕರು ಪೌರಾಯುಕ್ತರಿಗೆ ಸೂಚನೆ ನೀಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ನಾಳೆಯೇ ದಾರಿ ದೀಪ ಅಳವಡಿಸಿ ಕೊಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಒಬ್ಬರೆ ಇದ್ದು ಅವರಿಗೆ ತುಂಬಾ ಒತ್ತಡವಿದೆ ಎಂದು ಶಾಸಕರ ಗಮನಕ್ಕೆ ತರಲಾಯಿತು.ಅನುಮತಿ ಪಡೆದು ಪ್ರವೇಶ:
ಆಸ್ಪತ್ರೆಗೆ ಅನೇಕ ಮಂದಿ ಹೊರಗಿನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯ ಸಹಿತ ಮಾತನಾಡಿಸಲು ಬರುತ್ತಾರೆ. ಆದರೆ ಅವರು ಗುಂಪು ಗುಂಪಾಗಿ ಬರುವಾಗ ರೋಗಿಳಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಿಂದ ಅನುಮತಿ ಪಡೆದು ಒಳಪ್ರವೇಶಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ನಾಮಫಲಕ ಅಳವಡಿಸುವ ಕಾರ್ಯಕ್ಕೂ ಅನುಮೋದನೆ ನೀಡಲಾಯಿತು.
ಗಲಾಟೆ ಮಾಡಿದರೆ ಪೊಲೀಸರಿಗೆ ದೂರು ನೀಡಿ:
ಆಸ್ಪತ್ರೆಗೆ ಬಂದು ವೈದ್ಯರ ಸಿಬ್ಬಂದಿಗಳ ಮತ್ತು ಇತರ ವಿಚಾರದಲ್ಲಿ ಸುಮ್ಮನೆ ಗಲಾಟೆ ಮಾಡಿದರೆ ಹಿಂದು ಮುಂದೆ ನೋಡದೆ ಪೊಲೀಸರಿಗೆ ದೂರು ನೀಡಿ. ಪೊಲೀಸರು ಕೂಡಾ ತಕ್ಷಣ ಆಸ್ಪತ್ರೆಯ ಸಮಸ್ಯೆ ವಿಚಾದಲ್ಲಿ ಸ್ಪಂಧನೆ ನೀಡಿ ಪರಿಹಾರ ಮಾಡಿ ಎಂದು ಇನ್ಸ್ಪಕ್ಟರ್ ಸತೀಶ್ ಜಿ.ಜೆ ಅವರಿಗೆ ಸೂಚಿಸಿದರು.
ಅನುಮತಿ ಪಡೆದು ಪ್ರವೇಶ:
ಆಸ್ಪತ್ರೆಗೆ ಅನೇಕ ಮಂದಿ ಹೊರಗಿನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯ ಸಹಿತ ಮಾತನಾಡಿಸಲು ಬರುತ್ತಾರೆ. ಆದರೆ ಅವರು ಗುಂಪು ಗುಂಪಾಗಿ ಬರುವಾಗ ರೋಗಿಳಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಿಂದ ಅನುಮತಿ ಪಡೆದು ಒಳಪ್ರವೇಶಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ನಾಮಫಲಕ ಅಳವಡಿಸುವ ಕಾರ್ಯಕ್ಕೂ ಅನುಮೋದನೆ ನೀಡಲಾಯಿತು.
ಗಲಾಟೆ ಮಾಡಿದರೆ ಪೊಲೀಸರಿಗೆ ದೂರು ನೀಡಿ:
ಆಸ್ಪತ್ರೆಗೆ ಬಂದು ವೈದ್ಯರ ಸಿಬ್ಬಂದಿಗಳ ಮತ್ತು ಇತರ ವಿಚಾರದಲ್ಲಿ ಸುಮ್ಮನೆ ಗಲಾಟೆ ಮಾಡಿದರೆ ಹಿಂದು ಮುಂದೆ ನೋಡದೆ ಪೊಲೀಸರಿಗೆ ದೂರು ನೀಡಿ. ಪೊಲೀಸರು ಕೂಡಾ ತಕ್ಷಣ ಆಸ್ಪತ್ರೆಯ ಸಮಸ್ಯೆ ವಿಚಾದಲ್ಲಿ ಸ್ಪಂಧನೆ ನೀಡಿ ಪರಿಹಾರ ಮಾಡಿ ಎಂದು ಇನ್ಸ್ಪಕ್ಟರ್ ಸತೀಶ್ ಜಿ.ಜೆ ಅವರಿಗೆ ಸೂಚಿಸಿದರು.
ಮೆಡಿಕಲ್ ಕಾಲೇಜಿಗೆ ಪ್ರಥಮ, ಆಸ್ಪತ್ರೆಗೆ ಅಪ್ಗ್ರೇಡ್ಗೆ ದ್ವೀತಿಯ ಆದ್ಯತೆ :
ಪುತ್ತೂರು ಸರಕಾರಿ ಆಸ್ಪತ್ರೆಯನ್ನು ೩೦೦ ಬೆಡ್ ನ ಮೇಲ್ದದರ್ಜೆಗೆ ಏರಿಸಲು ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ನಮಗೆ ಮೆಡಿಕಲ್ ಕಾಲೇಜು ಆದರೆ ಬೆಡ್ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮೇಲ್ದರ್ಜೆಗೆ ಏರಿಸಲು ಸ್ವಲ್ಪ ಗೊಂದಲವಿದೆ ಎಂದು ಶಾಸಕರು ಸೇಡಿಯಾಪು ಸಮೀಪ ೪೦ ಎಕ್ರೆ ಜಾಗೆ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಮೀಸಲು ಇರಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ರೂ. ೨೫೦ ಕೋಟಿ ಅನುದಾನ ಕೇಳಿದ್ದೇವೆ. ಮುಖ್ಯಮತ್ರಿಗಳಿಗೆ ಕಳೆದ ಬಜೆಟ್ನಲ್ಲಿ ಹೊಂದಾಣಿಕೆ ಮಾಡಲು ಆಗಿಲ್ಲ. ಈ ವರ್ಷದ ಬಜೆಟ್ನಲ್ಲಿ ಕೊಡುತ್ತೆವೆ ಎಂದು ಹೇಳಿದ್ದಾರೆ. ಹಾಗಾಗಿ ೩೦೦ ಬೆಡ್ ಆಸ್ಪತ್ರೆಗೆ ಪ್ರಸ್ತಾವನೆ ಮಾಡುದಾ ಅಥವಾ ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಮಾಡುದೋ ಎಂಬುದು ಇಲ್ಲಿ ಮುಖ್ಯ. ನನ್ನ ಪ್ರಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಮೆಡಿಕಲ್ ಕಾಲೇಜು ಸಿಕ್ಕಿಲ್ಲ ಎಂದರೆ ಆಸ್ಪತ್ರೆಯನ್ನು ಮೇಲ್ದದರ್ಜೆಗೆ ಏರಿಸುವ ೨ನೇ ಅಪ್ಷನ್ ಇಡೋಣ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು
ಸಾಂತ್ವನ ಕೇಂದ್ರ ದುರಸ್ಥಿಗೆ ಶಾಸಕರ ಸೂಚನೆ :
ಇದೇ ವೇಳೆ ಮಾತನಾಡಿದ ಶಾಸಕರು ಸಾಂತ್ವನ ಕೇಂದ್ರ ನಾದುರಸ್ಥಿಯಲ್ಲಿದೆ ಅದನ್ನು ಶೀಘ್ರವೇ ದುರಸ್ಥಿ ಮಾಡಬೇಕು. ಮಹಿಳಾ ಸಾಂತ್ವನ ಕೇಂದ್ರಕ್ಕೆ ಏನೆಲ್ಲಾ ವ್ಯವಸ್ಥೆಗಳು ಬೇಕೋ ಅದೆಲ್ಲವನ್ನೂ ಮಾಡಬೇಕು. ಆ ಕೇಂದ್ರದಲ್ಲಿ ಸಾಂತ್ವನ ನೀಡುವ ಮೂಲಕ ಯಾರಿಗಾದ್ರು ಒಬ್ಬರಿಗೆ ಒಳ್ಳೆಯದಾದರೂ ಅದು ನಮಗೆ ಅತ್ಯಂತ ಸಂತೋಷದ ವಿಚಾರವಾಗಿದೆ. ಇಲ್ಲಿ ಜನರಿಗೆ ಏನು ಬೇಕೋ ಅದೆಲ್ಲವನ್ನೂ ಅಗತ್ಯವಾಗಿ ವ್ಯವಸ್ಥೆ ಮಾಡಬೇಕು. ವ್ಯವಸ್ಥೆ ಇಲ್ಲದೆ ಬಡವರು ತೊಂದರೆಗೊಳಗಾಗಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಶಾಸಕರು ಸೂಚಿಸಿದರು. ನಗರಸಭಾ ಕಮಿಷನರ್ ರವರು ಸಾಂತ್ವನ ಕೆಂದ್ರ ದುರಸ್ತಿ ಮಾಡಿಸುವುದಾಗಿ ಸಭೆಗೆ ತಿಳಿಸಿದರು.