Published
6 months agoon
By
Akkare Newsಬ್ಯಾಂಕ್ ಆಫ್ ಬರೋಡ ಕಲ್ಲಡ್ಕ ಶಾಖೆಯ ಶಾಖಾ ವ್ಯವಸ್ಥಾಪಕ ಧೀರಜ್ ಹಾಗೂ ಶಾಖ ಸಿಬ್ಬಂದಿಗಳಾದ ಕಿರಣ್, ಪ್ರಸಾದ್, ಶಕುಂತಲಾ ಬ್ಯಾಂಕಿನ ಬೇರೆ ಶಾಖೆಗಳಿಗೆ ವರ್ಗಾವಣೆ ಗೊಂಡಿದ್ದು ಅವರಿಗೆ ಕಲ್ಲಡ್ಕ ಬ್ಯಾಂಕಿನ ಗ್ರಾಹಕರ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಕಲ್ಲಡ್ಕ ಶಾಖಾ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ಅಭಿನಂದನೆ ಸ್ವೀಕರಿಸಿದ ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಧೀರಜ್ ಮಾತನಾಡಿ ಬ್ಯಾಂಕಿನ ವ್ಯವಹಾರದಲ್ಲಿ ಗ್ರಾಹಕರು ಕಲ್ಲಡ್ಕದಲ್ಲಿ ತನಗೆ ಕೊಟ್ಟ ಸಹಕಾರವನ್ನು ಸ್ಮರಿಸುತ್ತಾ, ಮುಂದೆ ಬರುವ ಶಾಖಾ ಸ್ಥಾಪಕರಿಗೂ ಇದೇ ರೀತಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರಾದ ಯತೀನ್ ಕುಮಾರ್ ಏಳ್ತಿಮಾರು, ಚಿತ್ತರಂಜನ್ ಹೊಸಕಟ್ಟ,ರತ್ನಕರ್ ಶೆಟ್ಟಿ ವೈಶಾಲಿ, ಧೀರಜ್ ಆಚಾರ್ಯ,ನಿತಿನ್ ಕುಮಾರ್, ನವಾಜ್, ಇಂತಿಯಾಜ್, ಅಶ್ರಫ್, ಸುರೇಶ್ ಶೆಟ್ಟಿ. ತಾಹಿರ್, ಮುಂತಾದವರು ಉಪಸ್ಥಿತರಿದ್ದರು.