ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪರಸ್ಪರ ಧರ್ಮಗಳನ್ನು ಪ್ರೀತಿಸುವುದರಿಂದ ಸಾಧನೆ ಸಾಧ್ಯ ಹೊರತು ದ್ವೇಷದಿಂದ ಅಲ್ಲ – ಶಾಸಕ ಅಶೋಕ್ ರೈ

Published

on

ಉಪ್ಪಿನಂಗಡಿ :ನೂರಾನಿಯ್ಯ ಜಮಾಅತ್ ಕಮಿಟಿ ಹಾಗೂ ನೂರಾನಿಯ್ಯ ಯಂಗ್ಮೆನ್ಸ್ ಅಸೋಸಿಯೇಶನ್ ಕುದ್ಲೂರು ಇದರ ಆಶ್ರಯದಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಭಾಗಿಯಾದ,ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ.

 

ಉಪ್ಪಿನಂಗಡಿಯ ಕುದ್ಲೂರು ನೂರಾನಿಯ್ಯ ಜಮಾಅತ್ ಕಮಿಟಿ ಹಾಗೂ ನೂರಾನಿಯ್ಯ ಯಂಗ್ಮೆನ್ಸ್ ಅಸೋಸಿಯೇಶನ್ ಇಲ್ಲಿ ನಡೆದ ಮಕ್ಕಳ ಮೀಲಾದ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ, ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಶಾಸಕರ ಜೊತೆ ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಮ್, ಕೋಡಿಂಬಾಡಿ ಪಂಚಾಯತ್ ಉಪಾಧ್ಯಕ್ಷರಾದ, ಜಯಪ್ರಕಾಶ್ ಬದಿನಾರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ತೌಸೀಫ್ ಯು.ಟಿ, ನಝೀರ್ ಬೆದ್ರೋಡಿ, ಆಗಮಿಸಿದ್ದರು.

ಕುದ್ಲೂರು ಜಮಾಅತ್ ಅಧ್ಯಕ್ಷರಾದ ಯೂಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಖತೀಬರಾದ ಬಹು ಅದ್ನಾನ್ ಅನ್ಸಾರಿಯವರು ನೆರೆದ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂಧರ್ಬದಲ್ಲಿ ಜಮಾಅತ್ ಕಾರ್ಯದರ್ಶಿಗಳಾದ ಹಾಜಿ ಹುಸನಬ್ಬ , ಹಮೀದ್ ಕರಾವಳಿ ಯಂಗ್ಮೆನ್ಸ್ ಪಧಾದಿಕಾರಿಗಳಾದ ಮನ್ಸೂರು,ಕಲಂದರ್,ಲತೀಫ್,ಮುಝಾಫರ್,ರವೂಫ್,ಆಶಿಕ್ ಗಲ್ಫ್ ಕಮಿಟಿಯ ಹಂಝ ನ್ಯಾಷನಲ್,ಅನಸ್ ಹಾಗೂ ಸ್ಥಳೀಯ ಬೂತ್ ಅಧ್ಯಕ್ಷ ಮಜೀದ್ ಕುದ್ಲೂರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement