ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

Published

on

ಪುತ್ತೂರು: ಪ್ರತೀ ಮಳೆಗಾಲದಲ್ಲಿ ವನಮಹೋತ್ಸವ ಬಹಳ ಅಬ್ನರದಿಂದ ಆಚರಣೆ ಮಾಡುತ್ತೇವೆ, ಸಿಕ್ಕ ಸಿಕ್ಕಲ್ಲೆಲ್ಲ ಗಿಡ ನೆಡುತ್ತಾರೆ ಆದರೆ ಅದು ನೆಟ್ಟ ಬಳಿಕ ಏನಾಗಿದೆ ಎಂದು ನೋಡಬೇಕಾದ ಅಥವಾ ಅದನ್ನು ಆರೈಕೆ ಮಾಡಬೇಕಾದ ಜವಾವ್ದಾರಿಯೂ ನಮಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ‌ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಬದಿಗಳಲ್ಲಿಯೂ ಗಡಿಗಳನ್ನು ನೆಡುವಂತೆ ಸೂಚನೆ ನೀಡಿದ್ದೇನೆ. ಗಿಡಗಳನ್ನು ಪ್ರಾಣಿಗಳು ತಿನ್ನದಂತೆ ಅದಕ್ಕೆ ತಡೆ ಬೇಲಿ ಗೊಬ್ಬರ ಮತ್ತು ಕಾಲ ಕಾಲಕ್ಕೆ ಅದಕ್ಕೆ ಗೊಬ್ಬರವನ್ನೂ ಹಾಕುವಂತೆ ಸೂಚನೆ ನೀಡಿದ್ದೇನೆ. ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗೆ. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ‌ ಮೂಡಬೇಕಿದೆ.ಯಾವುದೇ ಕಾರಣಕ್ಕೂ ಸಾರ್ವಜನಿಕರು ನೆಟ್ಟ ಗಿಡವನ್ನು ಕೀಳಬೇಡಿ ಗಿಡಗಳು ಯಾರಿಗಾದರೂ ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.

 

ನಾಶವಾಗುತ್ತಿರುವ ಗಿಡಗಳ ಪೋಷಣೆ ಮಾಡಬೇಕು:
ಈಗಾಗಲೇ ಅನೇಕ ಕಾಟು ಹಣ್ಣಿನ ಗಿಡಗಳು‌ನಾಶವಾಗುತ್ತಿದೆ. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿದೆ ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ರೈ ಚಾರಿಟೇಬಲ್ ಟ್ರಸ್ಟ್ ವನಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನಾಧ್ಯಂತ ಜಂಟಿಯಾಗಿ ನಡೆಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ವನಮಹೋತ್ಸವ ನಡೆಯಲಿದೆ ಎಂದು ಹೇಳಿದರು.

ಡಿವೈಡರ್ ಮಧ್ಯೆ ಹೂವಿನ ಗಿಡ
ರಸ್ತೆ ಮಧ್ಯೆ ಇರುವ ಡಿವೈಡರ್ ಗಳ ಮಧ್ಯೆ ವಿವಿಧ ತರದ ಹೂವಿನ ಗಿಡಗಳನ್ನು ನೆಟ್ಟು ರಸ್ತೆಯನ್ನು ಸೌಂದರ್ಯೀಕರಣ ಮಾಡಲಾಗುತ್ತದೆ. ಪುತ್ತೂರಿನಿಂದ ಉಪ್ಪಿನಂಗಡಿ ತನಕ ಹೂವಿನ ಗಿಡ ನೆಡಲಾಗುತ್ತದೆ. ಆಂದ್ರಪ್ರದೇಶದಿಂದ ತಂದಿರುವ ಕಾಗದ ಹೂವಿನ ಗಿಡಗಳೂ ಡಿವೈಡರ್ ಮಧ್ಯೆ ಕಂಗೊಳಿಸಲಿದೆ ಅದನ್ನು ಪೋಷಣೆ ಮಾಡುವ ಕೆಲಸವೂ ನಡೆಯಲಿದೆ ಎಂದು ಹೇಳಿದರು.

ಒಂದು ಮಗು ಒಂದು ಗಿಡ

ಪ್ರತೀಯೊಬ್ಬ ವಿದ್ಯಾರ್ಥಿಯು ತನ್ನ ಮನೆಯಲ್ಲಿ ಒಂದು ಗಿಡವನ್ನು ನರಡಬೇಕು. ಪೋಷಕರು ಇದಕ್ಕೆ ಸಹಕಾರ ನೀಡಬೇಕು. ಮಕ್ಕಳಿಗೆ ಗಿಡವನ್ನು ನೀಡುವ ಮತ್ತು ಗಿಡ ನೆಡಲು ಆಸಕ್ತಿ ಇದ್ದವರಿಗೆ ಗಿಡ ನೀಡುವ ಕೆಲಸ ಅರಣ್ಯ ಇಲಾಖೆ ಮಾಡಲಿದೆ ಎಂದು‌ಶಾಸಕರು ತಿಳಿಸಿದರು.

ಈ ವರ್ಷ ಕಾಟು‌ಮಾವು ಸಿಕ್ಕಿದೆ:
ಬೇಸಿಗೆಯಲ್ಲಿ ಕಾಟು ಮಾವು ಕೊಯ್ಯದಂತೆ ತಡೆ ಮಾಡಿದ ಕಾರಣ ಈ ವರ್ಷ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರಿಗೆ ಕಾಟು ಮಾವು ಸಿಕ್ಕಿದೆ ಎಂಬ ಮಾಹಿತಿ ಇದೆ ಎಂದು ಶಾಸಕರು ಹೇಳಿದರು.
ಶಾಸಕರಬಸೂಚನೆಯಂತೆ ಗಿಡ ನಾಟಿ ಮಾಡಲಿದ್ದೇವೆ: ಎಸಿಎಫ್
ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ತಾಲೂಕು ವ್ಯಾಪ್ತಿಯ ರಸ್ತೆ ಬದಿ ಮತ್ತು ಆಯ್ದ ಸ್ಥಳಗಳಲ್ಲಿ‌ ಗಿಡ ನೆಡುವ ಕಾರ್ಯಕ್ರಮ‌ಮುಂದಿನ ದಿನಗಳಲ್ಲಿ‌ನಡೆಯಲಿದೆ ,ವನಮಹೋತ್ಸವ ಯಶಸ್ವಿಯಾಗಲು ಎಲ್ಲರ ಸಹಕಾರ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಪುತ್ತೂರು ಸಹಾಯಕ ಸಂರಕ್ಷಣಾಧಿಕಾರಿ ಸುಬ್ಬ ನಾಯ್ಕ‌ಹೇಳಿದರು.

ಟ್ರಸ್ಟ್ ನ‌ ಸಂಪೂರ್ಣ ಸಹಕಾರ: ಸುದೇಶ್ ಶೆಟ್ಟಿ
ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮಾತನಾಡಿ ಶಾಸಕರ ಗಿಡ ನೆಡುವ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಗಿಡಕ್ಕೆ ಗೊಬ್ನರ ಹಾಕುವ ಕಾರ್ಯಕ್ಕೆ ಇಂದು ಚಾಲನೆಯನ್ನು ನೀಡಿದ್ದೇವೆ. ರಸ್ತೆ ಬದಿಯಲ್ಲಿರುವ ಮರಗಳನ್ನು ರಸ್ತೆ ಅಭಿವೃದ್ದಿ‌ಮಾಡುವ ಕಡಿಯಲಾಗಿದೆ ಆ ಜಾಗದಲ್ಲಿ‌ಮತ್ತೆ ಗಿಡ ಬೆಳೆಸುವ ಮೂಲಕ ಹಳೆಯ ವೈಭವ ಮತ್ತೆ ನತಳಬೇಕಿದೆ ಎಂದು ಹೇಳಿದರು.
ಈ‌ಸಂದರ್ಭದಲ್ಲಿ‌ ಅರಣ್ಯಾಧಿಕಾರಿ ಕಿರಣ್ ಬಿ‌, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸೇರಿದಂತೆ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯ‌ಸಿಬಂದಿಗಳು, ರೈ ಚಾರಿಟೇಬಲ್ ಟ್ತಸ್ಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement