Published
6 months agoon
By
Akkare Newsಜೂ 27 ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಗರದ ರೊಸಾರಿಯೋ ಬಳಿ ನಡೆದಿದೆ.
ಮೃತರಲ್ಲಿ ಓರ್ವರನ್ನು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಎಂದು ಗುರುತಿಸಲಾಗಿದೆ. ರೋಸಾರಿಯೋ ಶಾಲೆಯ ಹಿಂಭಾಗದಲ್ಲಿ ರಿಕ್ಷಾ ಚಾಲಕರೊಬ್ಬರು ಆಟೋ ತೊಳಿಯುತ್ತಿರುವ ಸಮಯದಲ್ಲಿ ವಿದ್ಯುತ್ ತಂತಿಯೊಂದು ಅವರ ಮೇಲೆ ಕಡಿದು ಬಿದ್ದಿದೆ. ತಕ್ಷಣ ಅವರಿಗೆ ವಿದ್ಯುತ್ ಶಾಕ್ ತಗುಲಿದ್ದು ಅದನ್ನು ಕಂಡು ಮತ್ತೊಬ್ಬ ರಿಕ್ಷಾ ಚಾಲಕರು ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.