Published
6 months agoon
By
Akkare Newsಬೆಂಗಳೂರು, ಜೂ.28: ವೈಟ್ ಬೋರ್ಡ್(White Board)ನಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಕಾರು ಮಾಲೀಕರಿಗೆ ಆರ್ಟಿಓ(RTO) ಶಾಕ್ ಕೊಟ್ಟಿದ್ದು, ಅನಧಿಕೃತವಾಗಿ ಸಂಚಾರ ಮಾಡ್ತಿದ್ದ ಬಿಎಂಡಬ್ಲೂ, ವೋಲ್ವೋ, ಎಲೆಕ್ಟ್ರಿಕ್ ಬಿವೈಡಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ವಾಹನ ಗಳನ್ನು ಸೀಜ್ ಮಾಡಿದ್ದಾರೆ. ಜೊತೆಗೆ ಇನ್ನೂರಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ. ಆ್ಯಪ್ಗಳ ಮೂಲಕ ಅನಧಿಕೃತವಾಗಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತ ಆರ್ಟಿಓ ಅಧಿಕಾರಿಗಳು ಕಾರು ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಫೀಲ್ಡ್ಗಿಳಿದಿದ್ದ ಆರ್ಟಿಓ ಅಧಿಕಾರಿಗಳು, ಹತ್ತು ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದಾರೆ. ತೆರಿಗೆ ಕಟ್ಟದ, ವಾಹನಗಳ ಮೇಲೆ ಅನಧಿಕೃತವಾಗಿ ಅಡ್ವರ್ಟೈಸ್ಮೆಂಟ್ ಹಾಕಿದ, ಹೆಚ್ಚುವರಿ ಲೈಟ್ಸ್, ಬಸ್ ಮೇಲೆ ಹೆವಿ ಲೋಡ್ ಸೇರಿದಂತೆ ಎಲ್ಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಸಾಕಷ್ಟು ಕಾರು ಮಾಲೀಕರು ತಮ್ಮ ವೈಟ್ ಬೋರ್ಡ್ ಕಾರುಗಳಲ್ಲಿ ಟ್ರಾವೆಲ್ಸ್ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಅಂತಹ ವಾಹನಗಳನ್ನು ಸೀಜ್ ಮಾಡಲು ಆರ್ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.
ಇನ್ನು ನಿಯಮಗಳ ಪ್ರಕಾರ ವೈಟ್ ಬೋರ್ಡ್ ವಾಹನಗಳಿರೋದು ಸ್ವಂತಕ್ಕೆ, ಯೆಲ್ಲೋ ಬೋರ್ಡ್ ವಾಹನಳನ್ನ ಮಾತ್ರ ಬಾಡಿಗೆ ಹೊಡೆಯಲು ಬಿಡಬೇಕು. ಆದರೆ, ಟ್ರಾವೆಲ್ಸ್ ಮಾಲೀಕರು ರೂಲ್ಸ್ ಬ್ರೇಕ್ ಮಾಡಿ ವಾಹನ ಚಲಾವಣೆ ಮಾಡಿದ್ದು, ಇಂತಹವರಿಗೆ ಆರ್ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.