ನಮ್ಮೊಂದಿಗೆ ಸಂಪರ್ಕ ಸಾಧಿಸಿ

ನಿಧನ

ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು

Published

on

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಲವು ಜೀವಗಳನ್ನು ಬ*ಲಿ ಪಡೆದಿದೆ. ಇದೀಗ ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿಯಾಗಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವನ್ನಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಗಣೇಶ್ ಶೆಟ್ಟಿ ಪುತ್ರಿ ಪ್ರತೀಕ್ಷಾ ಶೆಟ್ಟಿ(20) ಮೃ*ತ ದುರ್ದೈವಿ. ಯುವತಿ ಕಲ್ಲಡ್ಕದ ಮೆಡಿಕಲೊಂದರಲ್ಲಿ ಕೆಲಸ ಮಾಡುತ್ತಿದ್ದಳು.

ಪ್ರತೀಕ್ಷಾ ಶೆಟ್ಟಿ ಮನೆಯ ಬಳಿ ಪಾರ್ಸೆಲ್ ಬಂದಿದೆ ಎಂದು ತೆಗೆದುಕೊಂಡು ಹೋಗಲು ಮನೆ ಸಮೀಪದ ರಸ್ತೆಗೆ ಬಂದಿದ್ದಾಳೆ. ರಸ್ತೆಯಲ್ಲಿ ವಿದ್ಯುತ್ ತಂತಿ ಮುರಿದು ಬಿದ್ದಿದ್ದು, ನೀರಿಗೆ ವಿದ್ಯುತ್‌ ಪ್ರವಹಿಸಿದೆ. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಸ್ಥಳದಲ್ಲೇ ಯುವತಿ ಮೃ*ತಪಟ್ಟಿದ್ದಾಳೆ.

 

 

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಯುವತಿಯ ಮೃ*ತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement