Published
6 months agoon
By
Akkare Newsಪುತ್ತೂರು:ಜೂ,29.ಪುತ್ತೂರು ನಗರ ಸಭಾ ವ್ಯಾಪ್ತಿಯ ಬನ್ನೂರು ಜೈನರ ಗುರಿ ಎಂಬಲ್ಲಿ ಅಪಾಯಕಾರಿ ವಿದ್ಯುತ್ ಕಂಬ ಮನೆಗೆ ವಾಲಿರುವುದರಿಂದ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗಣೇಶ್ ಆಚಾರ್ಯ ಬನ್ನೂರು ರವರು ಪುತ್ತೂರು ಮೆಸ್ಕಾಂ ರೈತ ಬಂಧು ಪ್ರತಿನಿಧಿ ಚಂದ್ರಶೇಖರ ಕಲ್ಲಗುಡ್ಡೆ ಮುಖಾಂತರ ಶಾಸಕರ ಕಚೇರಿಗೆ ತಿಳಿಸಿದಾಗ, ಶಾಸಕರು ಕೂಡಲೇ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳಾದ ರಾಮಚಂದ್ರ ಅವರು ರಾಜೇಶ್ ರವರಿಗೆ ಸೂಚನೆ ನೀಡಿದರು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಹೊಸ ವಿದ್ಯುತ್ ಕಂಬವನ್ನು ಹಾಕಿರುತ್ತಾರೆ.ಮೆಸ್ಕಾಂ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ
ಪ್ರ