Published
1 year agoon
By
Akkare Newsದೆಹಲಿ; ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಮಿಜೋರಾಂನಲ್ಲಿ ನ.7 ರಂದು ಚುನಾವಣೆ ನಡೆಯಲಿದೆ. ಛತ್ತೀಸ್‌ಘಡದಲ್ಲಿ ನ.7 ಮತ್ತು 17, ಮಧ್ಯಪ್ರದೇಶ ನ.17, ರಾಜಸ್ಥಾನ ನ.23, ತೆಲಂಗಾಣದಲ್ಲಿ ನ.30ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.