Published
6 months agoon
By
Akkare Newsಜುಲೈ 1 ರಿಂದಲೇ ಮದ್ಯದ ದರಗಳನ್ನು ಪರಿಷ್ಕರಿಸಲು ಮುಂದಾಗಿದ್ದ ರಾಜ್ಯ ಸರಕಾರ ಇದೀಗ 1 ತಿಂಗಳ ಮಟ್ಟಿಗೆ ವಿಳಂಬ ಧೋರಣೆ ಅನುಸರಿಸಲು ಮುಂದಾಗಿರುವ ಕುರಿತು ವರದಿಯಾಗಿದೆ. ಹಾಗಾಗಿ ಮದ್ಯ ಪ್ರಿಯರಿಗೆ ದರದ ಮದ್ಯಗಳ ಬೆಲೆ ಹೆಚ್ಚಳ ಒಂದು ತಿಂಗಳು ತಡವಾಗಲಿದೆ.
ಸರಕಾರ ಜುಲೈ 1 ರಿಂದ ಅನ್ವಯವಾಗುವಂತೆ ಮದ್ಯದ ದರ ಪರಿಷ್ಕರಣೆ ಮಾಡಲಾಗುವುದರ ಕುರಿತು ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದರ ಪರಿಷ್ಕರಣೆಯನ್ನು ಒಂದು ತಿಂಗಳ ಮಟ್ಟಿಗೆ ಮಾಡದೆ, ಇದೀಗ ಇರುವ ದರವನ್ನು ಯಥಾಸ್ಥಿತಿ ಮುಂದುವರೆಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.