Published
6 months agoon
By
Akkare Newsಮಂಗಳೂರು : ವಾಹನ ಚಲಾಯಿಸುವಾಗ ಎದುರು ಬದಿಯಿಂದ ಬರುವ ವಾಹನ ಸವಾರರಿಗೆ ತೊಂದರೆಯಾಗುವಂಥ ತೀಕ್ಷ್ಣ ಬೆಳಕಿನ ಎಲ್ಇಡಿ ಲೈಟ್ಗಳ ವಿರುದ್ದ ಪೊಲೀಸ್ ಕಾರ್ಯಾಚರಣೆ ರಾಜ್ಯಾದ್ಯಾಂತ ಆರಂಭವಾಗಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿ ಲೈಟ್ ಅಳವಡಿಸುವ ವಾಹನ ಮಾಲೀಕರ ವಿರುದ್ಧ ಕರ್ನಾಟಕ ಸಂಚಾರ ಪೊಲೀಸರು ಕಾರ್ಯಚರಣೆ ಶುರು ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾರ್ಯಾಚರಣೆ ಆರಂಭವಾಗಿದ್ದು ಈಗಾಗಲೇ 92 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕರ್ಕಶ ಹಾರ್ನ್, ಟಿಂಟ್ ಗ್ಲಾಸ್ ಹಾಕಿ ಓಡಾಟ ಮಾಡುವವರ ಮೇಲೂ ಪೊಲೀಸರು ಕ್ರಮ ಆರಂಭಿಸಿದ್ದಾರೆ.
ಮಂಗಳೂರಿನಲ್ಲೂ ಇದಕ್ಕಾಗಿ ಪೊಲೀಸರ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದ್ದು ಸಿಟಿ ಬಸ್, ಇತರ ಖಾಸಗಿ ವಾಹನಗಳ ಮೇಲೆ ಅಳವಡಿಸಿದ LED ಲೈಟ್, ಟಿಂಟ್ ಗ್ಲಾಸ್, ಕರ್ಕಶ ಹಾರ್ನ್ ಅಳವಡಿಸಿದ್ದನ್ನು ತೆರವು ಮಾಡಿ ಪ್ರಕರಣ ದಾಖಲು ಮಾಡಲು ಕ್ರಮವು ಸಂಚಾರಿ ಎಸಿಪಿ ನಜ್ಮಾ ಫಾರೂಕಿ ನೇತೃತ್ವದಲ್ಲಿ ಆರಂಭವಾಗಿದೆ.
ಮಂಗಳೂರಿನಲ್ಲಿ ಜು.3ರಂದು ಕಾರ್ಯಚರಣೆಯ ಸಂದರ್ಭ ಕರ್ಕಶ ಹಾರ್ನ್ ಟಿಂಟ್ LED ಲೈಟ್ ಇದ್ದರೆ ಅದನ್ನು ತೆಗೆಸಿದ ನಂತರವೇ ವಾಹನ ಸಂಚಾರಕ್ಕೆ ಅವಕಾಶ ನೀಡುವ ದೃಶ್ಯಗಳು ಕಂಡುಬಂದಿದೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಎಡಿಜಿಪಿ ಅಲೋಕ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು ಈವರೆಗೆ ರಾಜ್ಯದಲ್ಲಿ 1518 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.