ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ರಾಜ್ಯ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಳನ್ನು ನೇಮಿಸಿ ಆದೇಶ: ಇಲ್ಲಿದೆ ಪಟ್ಟಿ

Published

on

ಬೆಂಗಳೂರು : ರಾಜ್ಯ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ. ಈ ಮೂಲಕ ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾನುಗಳ ವಿಚಾರಣೆ, ಅನಿರೀಕ್ಷಿತ ತಪಸಾಣೆ ಕೈಗೊಂಡು ವರದಿಗೆ ಸೂಚಿಸಿದೆ.

 

 

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ಉಲ್ಲೇಖಿತ ಅಧಿಸೂಚನೆ ದಿನಾಂಕ:11.12.2023 ರಲ್ಲಿ ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.

ಮುಂದುವರೆದು, ಕೆಲವು ಜಿಲ್ಲೆಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿ ನಮೂದಿಸಿರುವಂತೆ ಮಾರ್ಪಡು ಮಾಡಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ.

 

ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮಾನ್ಯ ಉಸ್ತುವಾರಿ ಸಚಿವರುಗಳು ಜಿಲ್ಲೆಯ ತಾಲ್ಲೂಕು ಕಛೇರಿ, ತಾಲ್ಲೂಕು / ಜಿಲ್ಲಾ ಆಸ್ಪತ್ರೆ ಹಾಗೂ ಇನ್ನಿತರ ಜಿಲ್ಲೆಯಲ್ಲಿನ ಪುಮುಖ ಕಛೇರಿ / ಸ್ಥಳಗಳಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ಅವರೊಂದಿಗೆ ಹಾಜರಿದ್ದು ಸಮನ್ವಯತೆಯೊಂದಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು. ಅಲ್ಲದೇ ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆ.ಡಿ.ಪಿ) ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕಡ್ಡಾಯವಾಗಿ ಹಾಜರಿರುವುದು. ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಉಸ್ತುವಾರಿ ಜಿಲ್ಲೆಗೆ ಭೇಟಿ ನೀಡುವ ಮುನ್ನ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿಯನ್ನು ನೀಡುವಂತೆ ತಿಳಿಸಿದೆ.

 

ಹೀಗಿದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ

ಹರ್ಷ ಗುಪ್ತ- ಬೆಂಗಳೂರು ನಗರ

ಡಾ.ಪಿಸಿ ಜಾಫರ್- ಬೆಂಗಳೂರು ಗ್ರಾಮಾಂತರ

ವಿ ರಶ್ಮಿ ಮಹೇಶ್ – ರಾಮನಗರ

ಅಮಲಾನ್ ಆದಿತ್ಯ ಬಿಸ್ವಾಸ್ – ಚಿತ್ರದುರ್ಗ

ಡಾ.ಏಕ್ ರೂಪ್ ಕೌರ್- ಕೋಲಾರ

ವಿಪುಲ್ ಬನ್ಸಾಲ್- ಬೆಳಗಾವಿ

ಡಾ.ಎನ್ ಮಂಜುಳ- ಚಿಕ್ಕಬಳ್ಳಾಪುರ

ಬಿ.ಬಿ ಕಾವೇರಿ – ಶಿವಮೊಗ್ಗ

ಡಾ.ಶಾಮ್ಲಾ ಇಕ್ಬಾಲ್- ದಾವಣಗೆರೆ

ಡಾ.ಎಸ್ ಸೆಲ್ವಕುಮಾರ್ – ಮೈಸೂರು

ವಿ ಅನ್ಬುಕುಮಾರ್- ಮಂಡ್ಯ

ಪಿ.ಮಣಿವಣ್ಣನ್ – ಚಾಮರಾಜನಗರ

ಡಾ.ಎಂಎನ್ ಅಜಯ್ ನಾಗಭೂಷಣ್- ಹಾಸನ

ಡಾ.ಎನ್ ವಿ ಪ್ರಸಾದ್- ಕೊಡಗು

ರಾಜೇಂದ್ರ ಕುಮಾರ್ ಕಠಾರಿಯಾ- ಚಿಕ್ಕಮಗಳೂರು

ಜಿ.ಸತ್ಯವತಿ- ಉಡುಪಿ

ಎಲ್ ಕೆ ಅತೀಕ್- ದಕ್ಷಿಣ ಕನ್ನಡ

ತುಲಸಿ ಮದ್ದಿನೇನಿ- ತುಮಕೂರು

ಎಂ ದೀಪ ಚೋಳನ್ – ಧಾರವಾಡ

ರಣದೀಪ್ ಚೌಧರಿ- ಗದಗ

ಉಜ್ವಲ್ ಕುಮಾರ್ ಘೋಷ್- ವಿಜಯಪುರ

ರಿತೇಶ್ ಕುಮಾರ್ ಸಿಂಗ್- ಉತ್ತರ ಕನ್ನ

ಮೊಹಮ್ಮದ್ ಮೊಹಸಿನ್- ಬಾಗಲಕೋಟೆ

ಪಂಕಜ್ ಕುಮಾರ್ ಪಾಂಡೆ – ಕಲಬುರ್ಗಿ

ಮನೋಡ್ ಜೈನ್- ಯಾದಗಿರಿ

ಡಾ.ಜೆ ರವಿಶಂಕರ್- ರಾಯಚೂರು

ಕೆಪಿ ಮೋಹನ್ ರಾಜ್- ಕೊಪ್ಪಳ

ಡಾ.ಕೆವಿ ತ್ರಿಲೋಕ ಚಂದ್ರ- ಬಳ್ಳಾರಿ

ಡಿ.ರಂದೀಪ್ – ಬೀದರ್

ಡಾ.ಆರ್ ವಿಶಾಲ್- ಹಾವೇರಿ

ನವೀನ್ ರಾಜ್ ಸಿಂಗ್- ವಿಜಯನಗರ

 

 

Continue Reading
Click to comment

Leave a Reply

Your email address will not be published. Required fields are marked *

Advertisement