Published
6 months agoon
By
Akkare Newsಪುತ್ತೂರು: ಮನೆ ಕಟ್ಟುವಾಗ ಅಗತ್ಯವಾಗಿ ಬೇಕಾದ 9/11 ಪತ್ರ ಗ್ರಾಪಂ ಕಚೇರುಯಲ್ಲೇ ನೀಡುವಂತೆ ಹಿಂದಿನ ಸಿದ್ದರಾಮಯ್ಯ ಸರಕಾರ ಆದೇಶ ಮಾಡಿತ್ತು ಆದರೆ ಹಿಂದಿನ ಬೊಮ್ಮಾಯಿ ನೇತೃತ್ಬದ ಬಿಜೆಪಿ ಸರಕಾರ ಅದನ್ನು ಮುಡಾಗೆ ಶಿಫ್ಟ್ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರಕಾರ ಎಂದಿಗೂ ಜನರಿಗೆ ತೊಂದರೆ ಕೊಡುವುದೇ ಇಲ್ಲ. ಬಿಜೆಪಿ ಸರಕಾರ ಮಾಡಿದ ಕೆಟ್ಟ ಕೆಲಸದಿಂದ ಜನ ಈಗ ವ್ಯಥೆ ಅನುಭವಿಸುವಂತಾಗಿದೆ ಆದರೆ ಬಿಜೆಪಿಯವರು ತಾವು ನಾಡಿದ ಈ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜನ ಸತ್ಯ ಏನೆಂದು ಅರಿತುಕೊಳ್ಳಬೇಕು. ಜನರನ್ನು ಸುಳ್ಳು ಹೇಳಿಯೇ ಮಂಗ ಮಾಡುವ ಜಾಯಮಾನ ಬಿಜೆಪಿಯದ್ದು. ಈ ಹಿಂದೆಯೂ ಮಾಡಿದ್ದೂ ಅದನ್ನೇ ಈಗಲೂ ಮಾಡುತ್ತಿರುವುದು ಅದನ್ನೇ ಅಪಪ್ರಚಾರ ಮಾಡಿ ಅಧಿಕಾರ ಪಡೆಯುವ ಆಸೆಯಲ್ಲಿದ್ದಾರೆ. ಬುದ್ದಿವಂತ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಯಿಂದ ಜನ ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗ್ಯಾರಂಟಿ ಕೊಟ್ಟ ಸರಕಾರವನ್ನು ಜನ ಮರೆಯುವುದಿಲ್ಲ ಎಂಬ ನಂಬಿಕೆ ನಮಗೆ ಇದೆ.ಅಕ್ರಮಸಕ್ರಮ ಮ್ಯಾನುವಲ್ ಆಗಿ ನಡೆಯುತ್ತಿತ್ತು ಅದಕ್ಕೂ ಅ್ಯಾಪ್ ಮಾಡಿದ್ದು ಬಿಜೆಪಿ ಸರಕಾರ. ಮ್ಯಾನುವಲ್ ಆಗಿದ್ದಲ್ಲಿ ಎಲ್ಲರ ಅಕ್ರಮ ಸಕ್ರಮವನ್ನೂ ಮಾಡಿ ಮುಗಿಸಬಹುದಿತ್ತು ಆದರೆ ಅದಕ್ಕೂ ಬಿಜೆಪಿ ಆಪ್ ಇಟ್ಟಿದ್ದಾರೆ. ಯಾವುದೇ ಸರಕಾರ ಜನಪರ ಕೆಲಸ,ಜನಪರ ಯೋಜನೆಯನ್ನು ಜಾರಿಮಾಡಬೇಕು,ಸಾಧಕ ಬಾಧಕ ಅರಿತುಕೊಳ್ಳಬೇಕು ಎಂದುಬಿಜೆಪಿಸರಕಾರವನ್ನು ಶಾಸಕರು ಕುಟುಕಿದರು.