ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಉಪ್ಪಿನಂಗಡಿ -ಸೆಲ್ಪಿ ಪಾಯಿಂಟ್ ಆಗಿದ್ದ ಬ್ರಿಟಿಷರ ಕಾಲದ ಬ್ರಿಡ್ಜ್ ಬಂದ್ ಮಾಡಿದ ಜಿಲ್ಲಾಡಳಿತ

Published

on

puttur:ಜುಲೈ 06: ನಾದುರಸ್ತಿಯಲ್ಲಿದ್ದ ಬ್ರಿಟಿಷ್ ಕಾಲದ ಸೇತುವೆಗೆ ಸಾರ್ವಜನಿಕರ ಪ್ರವೇಶಕ್ಕೆ ದಕ್ಷಿಣಕನ್ನಡ ಜಿಲ್ಲಾಡಳಿತ ನಿಷೇಧ ಹೇರಿದೆ.ಪುತ್ತೂರು ತಾಲೂಕಿನಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಸೇತುವೆ ಸೇತುವೆ ಇದಾಗಿದ್ದು, ದುರಸ್ಥಿ ಹಂತದಲ್ಲಿದೆ.

 

ಈ ನಡುವೆ ಸೇತುವೆಯಲ್ಲಿರುವ ಕಬ್ಬಿಣದ ಸರಳುಗಳನ್ನು ಕಳ್ಳರು ಕದ್ದು ಹೋಗಿದ್ದರು. ಅಲ್ಲದೆ ಸೇತುವೆಯ ಬಳಿ ಭೇಟಿ ನೀಡುತ್ತಿರುವ ಸಾರ್ವಜನಿಕರು, ಸೇತುವೆಯ ಮಧ್ಯ ಭಾಗದಲ್ಲಿ ನಿಂತು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು, ಸೇತುವೆ ಎರಡೂ ಭಾಗದಲ್ಲಿ ಭದ್ರತೆಗೆ ಇದ್ದ ಕಬ್ಬಿಣದ ಸರಳುಗಳು ಇಲ್ಲದ ಕಾರಣ ಜನರಿಗೆ ಅಪಾಯವುಂಟಾಗುವ ಸಾಧ್ಯತೆ ಇತ್ತು.

 

ಈ ಹಿನ್ನಲೆ ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತದಿಂದ ಸೇತುವೆಯ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿಶೇಧ ಹೇರಿದೆ. ಈ ಸೇತುವೆ ವೇಲೆ ಯಾವುದೇ ತರಹದ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದ್ದು, ಸೇತುವೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸೇತುವೆ ಬಂದ್ ಮಾಡಲಾಗಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement