Published
6 months agoon
By
Akkare Newsಭಾರತ ದೇಶದ ಪ್ರಮುಖ ಸಂವಿಧಾನಿಕ ಹುದ್ದೆಯಾದ ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವ ಸಂಸದರಾಗಿರುವ ಶ್ರೀಯುತ ರಾಹುಲ್ ಗಾಂಧಿ ಅವರ ವಿರುದ್ದ ಪ್ರತಿಭಟಿಸುವ ಭರದಲ್ಲಿ ಅವರಿಗೆ ಸಂಸತ್ತಿನ ಒಳಗೆ ಹೋಗಿ ಕೆಪ್ಪೆಗೆ ಬಾರಿಸಬೇಕು ಜೊತೆಗೆ ಸಮಯ ಬಂದಾಗ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಬೇಕು ಎಂದು ಮಂಗಳೂರು ಉತ್ತರದ ಶಾಸಕರಾದ ಭರತ್ ಶೆಟ್ಟಿ ಅವರು ಬಿ ಜೆ ಪಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರದ ಭಾಗವಾಗಿದ್ದು, ಒಬ್ಬ ಕಾನೂನು ರೂಪಿಸುವ ಅಧಿಕಾರವುಳ್ಳ ಶಾಸಕನಾಗಿ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿಗೆ ಅಗೌರವ ತೋರಿಸುವುದರ ಜೊತೆಗೆ ಗರಿಷ್ಠ ಭಧ್ರತೆ ಯುಳ್ಳ ಸಂಸತ್ತಿನ ಭಧ್ರತೆಯ ಹಾಗೂ Z+ ಭದ್ರತಾ ವ್ಯವಸ್ಥೆ ಹೊಂದಿರುವ ವಿರೋಧ ಪಕ್ಷದ ನಾಯಕನ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಗ್ರಹ ಇಲಾಖೆಯ ಕಾರ್ಯಕ್ಷಮತೆಯನ್ನೇ ಅಣಕಿಸುವಂತಿದೆ.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಒಡ್ದುತ್ತಿರುವ ಶಾಸಕ ಭರತ್ ಶೆಟ್ಟಿ ಅವರ ವಿರುದ್ಧ ಕಾನೂನಿನ ರೀತಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕೆಂದು ಪುತ್ತೂರು ನಗರ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದರು..