ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ದುಬೈನಲ್ಲಿ ಕೆಲಸ ಅಂತ ಹೇಳಿ ಮಂಗಳೂರಿನಲ್ಲಿ ಕಳ್ಳತನದ ದಂಧೆ, ನಟೋರಿಯಸ್ ಕಳ್ಳರ ಬಂಧನ..!

Published

on

ಮಂಗಳೂರು : ದುಬೈನಲ್ಲಿ ಕೆಲಸ ಅಂತ ಸುಳ್ಳು ಹೇಳಿ ಮಂಗಳೂರಿನಲ್ಲಿ ಕಳ್ಳತನದ ದಂಧೆಯಲ್ಲಿ ತೊಡಗಿ ಹಣ ಮಾಡುತ್ತಿದ್ದ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಕೊಣಾಜೆಯಲ್ಲಿ ಇತ್ತೀಚೆಗೆ ನಡೆದಿದ್ದ ಕೆಲವಾರು ಕಳ್ಳತನದ ಪ್ರಕರಣಗಳನ್ನು ಭೇದಿಸಿರುವ ಕೊಣಾಜೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಅದರಲ್ಲಿ ಒಬ್ಬ ಆರೋಪಿ ಅರ್ಫಾಜ್, ಕೆಲಸಕ್ಕಾಗಿ ದುಬೈಗೆ ಹೋಗ್ತೀನಿ ಅಂತ ಹೇಳಿ ಅಲ್ಲಿ ಕೆಲಸ ಸಿಗದೇ, ಮನೆಯವರಿಗೆ ಮಾಹಿತಿಯೇ ನೀಡದಂತೆ ಆತ ಮಂಗಳೂರಿಗೆ ಬಂದು ಕಳ್ಳತನದಲ್ಲಿ ತೊಡಗಿದ್ದ. ಮತ್ತೊಂದೆಡೆ, ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿರುವುದಾಗಿ ಮನೆಯವರಿಗೆ ನಂಬಿಸಿದ್ದ ಜಂಶೀರ್ ಮಂಗಳೂರಿನಲ್ಲಿ ಕಳ್ಳತನವನ್ನೆ ದಂಧೆ ಮಾಡಿಕೊಂಡಿದ್ದ ಆ ಹಣವನ್ನು ಅವರು ಮನೆಗೆ ಕಳುಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಜಪೆ ನಿವಾಸಿ ಮಹಮ್ಮದ್‌ ಅರ್ಫಾಜ್‌ನನ್ನು ಆತನ ತಂದೆ ರಿಕ್ಷಾ ಡ್ರೈವರ್‌ 6 ತಿಂಗಳ ಹಿಂದೆ ಏಜೆನ್ಸಿಯೊಂದರ ಮೂಲಕ ದುಬೈಗೆ ಕೆಲಸಕ್ಕೆ ಕಳುಹಿಸಿದ್ದರು. ಅಲ್ಲಿ ಏಜೆನ್ಸಿಯವರು ಮೋಸ ಮಾಡಿದ ಕಾರಣ ಉದ್ಯೋಗ ಸಿಗದೆ ಮರಳಿ ಮಂಗಳೂರಿಗೆ ಬಂದು ಕೋಳಿ ಅಂಗಡಿಯಲ್ಲಿಕೆಲಸ ಮಾಡುತ್ತಿದ್ದ ಗೆಳೆಯ ಸಫ್ವಾನ್‌ ಮೂಲಕ ಕಳವು ಕೃತ್ಯದಲ್ಲಿತೊಡಗಿಸಿಕೊಂಡಿದ್ದ. ಕೊಣಾಜೆ ವ್ಯಾಪ್ತಿಯಲ್ಲಿಕಳವು ಕೃತ್ಯದಲ್ಲಿಗಳಿಸಿದ ಹಣ ಬಳಿಕ ತಾಯಿಯ ಬ್ಯಾಂಕ್‌ ಖಾತೆಗೆ ಹಾಕಿ, ತಾನು ದುಬೈಯಲ್ಲಿಸಂಪಾದನೆ ಮಾಡಿದ ಹಣ ಎಂದು ನಂಬಿಸಿದ್ದ. ತಂದೆ- ತಾಯಿ ಮಗ ವಿದೇಶದಲ್ಲಿಚೆನ್ನಾಗಿ ಸಂಪಾದನೆ ಮಾಡುತ್ತಿದ್ದಾನೆಂದು ಖುಷಿಯಲ್ಲಿದ್ದರು. ಇದೇ ರೀತಿ 3 ತಿಂಗಳ ಕಾಲ ಮನೆಯವರಿಗೂ ತಿಳಿಯದಂತೆ ವಂಚಿಸಿದ್ದ.

ಪ್ರಕರಣದಲ್ಲಿಬಂಧಿತ ಆರೋಪಿ, ಅರ್ಫಾಜ್‌ ಕೂಡ ಕೃತ್ಯದಲ್ಲಿಭಾಗಿಯಾಗಿದ್ದನೆಂದು ಬಾಯಿ ಬಿಟ್ಟಿದ್ದ. ಇದನ್ನು ಕೇಳಿ ಬಜಪೆ ಪೊಲೀಸರು ಆತನ ಮನೆಗೆ ಹೋಗಿ ಕೇಳಿದಾಗ ಹೆತ್ತವರು, ‘ಆತ ಇಲ್ಲಿಲ್ಲ, ದುಬೈಗೆ ಹೋಗಿ 6 ತಿಂಗಳಾಗಿದೆ. ಆತ ಹೇಗೆ ಕಳವು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ್ದರು. ಪೊಲೀಸರು ಕೃತ್ಯದ ಬಗ್ಗೆ ವಿವರವಾಗಿ ಹೇಳಿದಾಗ ಮನೆಯವರಿಗೆ ಅನುಮಾನ ಬರುತ್ತದೆ. ಆದರೂ ಅರ್ಫಾಜ್‌ ಪೊಲೀಸರಿಗೆ ಸಿಗಲಿಲ್ಲ. ಉಳಿದಂತೆ ಪ್ರಧಾನ ಆರೋಪಿ ಮಹಮ್ಮದ್‌ ಸಿಯಾಬ್‌ ಬಾರ್‌ ಬೆಂಡಿಂಗ್‌ ಕೆಲಸ ಮಾಡುತ್ತಿದ್ದ. ಅರ್ಫಾಜ್‌ ದುಬೈಯಿಂದ ಬಂದ ಬಳಿಕ ಸಫ್ವಾನ್‌ ಕೋಳಿ ಅಂಗಡಿ ಕೆಲಸವನ್ನು ಬಿಟ್ಟು ಕಳವು ಕೃತ್ಯದಲ್ಲೇ ಮುಂದುವರಿದ್ದ.

ಜಿಮ್‌ ಟ್ರೈನರ್‌ ಆಗಿದ್ದ ಜಂಶೀರ್‌ಸಜಿಪ ನಿವಾಸಿ ಜಂಶೀರ್‌ ಕೂಡ ಹಿಂದೆ ದುಬೈಯಲ್ಲಿದ್ದು, ಕೆಲವು ಸಮಯದ ಹಿಂದೆ ಊರಿಗೆ ಬಂದು ಬೆಂಗಳೂರಿನಲ್ಲಿಜಿಮ್‌ ಟ್ರೈನರ್‌ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಸಿಯಾಬ್‌, ಅರ್ಫಾಜ್‌ ಮತ್ತು ಸಫ್ವಾನ್‌ ಒಂದೂವರೆ ತಿಂಗಳ ಹಿಂದೆ ಮದುವೆ ಕಾರ್ಯಕ್ರಮದಲ್ಲಿಪರಿಚಯವಾಗುತ್ತಾರೆ. ಜಿಮ್‌ ಟ್ರೈನರ್‌ ಆದ ಕಾರಣ ಈತನ ದೇಹ ಕಟ್ಟುಮಸ್ತಾಗಿದ್ದು, ಆರೋಪಿಗಳು ಸುಲಭದಲ್ಲಿಹಣ ಮಾಡುವ ಪ್ಲ್ಯಾನ್‌ ಹೇಳುತ್ತಾರೆ. ಇದರಿಂದ ಮಾರುಹೋದ ಜಂಶೀರ್‌ ಕಳವು ಕೃತ್ಯಕ್ಕೆ ಮುಂದಾಗುತ್ತಾನೆ.

ಬೆಂಗಳೂರಿನಿಂದ ಮನೆಗೆ ಬಂದ ಜಂಶೀರ್‌ ಕೂಡ ಮತ್ತೆ ಬೆಂಗಳೂರಿಗೆ ತೆರಳುವುದಾಗಿ ಮನೆಯವರಿಗೆ ಸುಳ್ಳು ಹೇಳಿ ಬಟ್ಟೆಬರೆಗಳನ್ನು ತೆಗೆದುಕೊಂಡು ಹೊರಟು ಬಂದಿದ್ದ. ಬಳಿಕ ಅರ್ಫಾಜ್‌ನಂತೆ ಕಳವು ಕೃತ್ಯದಲ್ಲಿತೊಡಗಿದ್ದ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement