ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಪುತ್ತೂರು ವತಿಯಿಂದ ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ & ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ

Published

on

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಪುತ್ತೂರು ವತಿಯಿಂದ ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ & ಮರುಪರೀಕ್ಷೆಗೆ ಆಗ್ರಹಿಸಿ NSUI ಅಧ್ಯಕ್ಷರಾದ ಎಡ್ವರ್ಡ್ ಪುತ್ತೂರು ರವರ ನೇತೃತ್ವದಲ್ಲಿ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.

 

ಹಿರಿಯ ನಾಯಕರು ಮತ್ತು NSUI ಮಾಜಿ ಅಧ್ಯಕ್ಷರಾದ ಕಾವು ಹೇಮಾನಾಥ ಶೆಟ್ಟಿ ಮಾತನಾಡಿ, ನೀಟ್ ಅಕ್ರಮವು ಬಹಳ ಗಂಭೀರ ವಿಷಯವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸುತ್ತಿದೆ. ಇದು ಖಂಡನೀಯ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂದು ದೇಶದ್ಯಾಂತ ಹೋರಾಟ ನಡೆಸುತ್ತಿದ್ದು ಖಂಡಿತವಾಗಿಯೂ ಈ ಹೋರಾಟಕ್ಕೆ ಜಯ ಸಿಗಲಿದೆ ಎಂದರು.

 

ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ, “NSUI ವಿದ್ಯಾರ್ಥಿ ಸಂಘಟನೆಯು ನೀಟ್ ಪರೀಕ್ಷೆಯಲ್ಲಿನ ಅಕ್ರಮದ ಬಗ್ಗೆ ದೇಶದಲ್ಲಿ ಸೇರಿದಂತೆ ಪುತ್ತೂರಿನಲ್ಲಿಯೂ ಪ್ರತಿಭಟನೆ ಮುಖಾಂತರ ವಿದ್ಯಾರ್ಥಿಗಳ ಪರ ಹೋರಾಡುತ್ತಿರುವುದು ಒಳ್ಳೆಯ ವಿಚಾರ. ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯನ್ನು ಪಾರದರ್ಶಕವಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದರು.

NSUI ಅಧ್ಯಕ್ಷ ಎಡ್ವರ್ಡ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ನಾವು ಸದಾ ಅವರ ಪರ ಇದ್ದೇವೆ. ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ದೊರಕುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ” ಎಂದರು.

ರಾಜ್ಯ NSUI ಉಪಾಧ್ಯಕ್ಷ ಫಾರೂಕ್ ಬಾಯಬೆ, “ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ. ನೀಟ್ ಮರು ಪರೀಕ್ಷೆ ನಡೆಸಲೇಬೇಕು” ಎಂದು ಒತ್ತಾಯಿಸಿದರು.

ರಾಜ್ಯ NSUI ಕಾರ್ಯದರ್ಶಿ ಭಾತೀಷ್ ಅಳಕೆಮಜಲು, “ಇಂದು ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯ ಮೌಲ್ಯವನ್ನು ಕಳೆಯುವಂತೆ ಮಾಡಿದೆ. ನೀಟ್ ಬರೆದು ತಮ್ಮ ವೈದ್ಯಕೀಯ ಭವಿಷ್ಯಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

NSUI ಪ್ರಮುಖ ಭವಿಷ್ ಸುವರ್ಣ ಮಾತನಾಡಿ, “ನೀಟ್ ಹಗರಣವು ಇಲ್ಲಿವರೆಗಿನ ಅತೀ ದೊಡ್ಡ ಶೈಕ್ಷಣಿಕ ಹಗರಣವಾಗಿದೆ. ನಾವು ನ್ಯಾಯ ದೊರಕುವ ವರೆಗೂ ಹಿಂಜರಿಯುವುದಿಲ್ಲ” ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಮಾಜಿ NSUI ಅಧ್ಯಕ್ಷರು ಕಾವು ಹೇಮಾನಾಥ ಶೆಟ್ಟಿ, ರಾಜ್ಯ ಕಾಂಗ್ರೆಸ್ ವಕ್ತಾರರಾದ ಅಮಳ ರಾಮಚಂದ್ರ, ಹಿರಿಯ ನಾಯಕರು ಸಂತೋಷ್ ಭಂಡಾರಿ, ರಾಜ್ಯ NSUI ಉಪಾಧ್ಯಕ್ಷರು ಫಾರೂಕ್ ಬಾಯಬೆ, ರಾಜ್ಯ NSUI ಕಾರ್ಯದರ್ಶಿ ಭಾತೀಷ್ ಅಳಕೆಮಜಲು, NSUI ಪ್ರಮುಖ ಭವಿಷ್ ಸುವರ್ಣ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಯೋಜನಕ ಸುಹೈಲ್, ಜಿಲ್ಲಾ ನಾಯಕ ಆಸ್ಟನ್ ಫೆರ್ನಾಂಡಿಸ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement