Published
5 months agoon
By
Akkare Newsಕಡಬ ಜು 15,ಕಡಬ ತಾಲೂಕಿನ ಎಡಮಂಗಳ ಸರಕಾರಿ ಶಾಲೆ ಕರಂಬಿಲ ದಲ್ಲಿ 14/07/2024 ರಂದು 6.30 ಗಂಟೆಗೆ ಶಾಲೆಯ ಒಳಗೆ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಆರ್ ಎಸ್ ಎಸ್ ಬೈಠಕ್ ನಡೆಸಲಾಯಿತು.
ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನವನ್ನು ಕೂಡ ಯಾವುದೇ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಕೂಡ ಕೊಡಲು ಇಲ್ಲ ಎನ್ನುವ ಆದೇಶಗಳು, ಸುತ್ತೋಲೆಗಳು, ಇರುವಾಗ ಅದನ್ನೆಲ್ಲವನ್ನು ಉಲ್ಲಂಘಿಸಿದ್ದಾರೆ.
ಇದಕ್ಕೆಲ್ಲಾ ಅಧಿಕಾರಿಗಳ ಮೌನ ಸಮ್ಮತಿ ಇದೆಯೇ?
ಶಾಲೆಗಳು ಎಂದೂ ಜಾತ್ಯಾತೀತ ನೆಲೆಯಲ್ಲಿ ಹಾಗೂ ಧರ್ಮಾಧಾರಿತವಾಗದೆ ಇರಬೇಕಾದ ಕಡೆ ಆರ್ ಎಸ್ ಎಸ್ ಗಳಿಗೆ ಶಾಲಾ ರಜಾದಿನದಲ್ಲಿ ಶಾಲೆಯನ್ನು ತೆರೆದು ಕೊಟ್ಟು ಕಾರ್ಯಕ್ರಮಕ್ಕೆ ಅವಕಾಶವನ್ನು ಕೊಟ್ಟಂತಹ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕ/ಶಿಕ್ಷಕಿ ಹಾಗೂ ಎಸ್ಡಿಎಂಸಿ ಅಧ್ಯಕ್ಷರ ಮೇಲೆ ಸರಕಾರಿ ಸ್ವತ್ತನ್ನು ನಿಯಮ ಉಲ್ಲಂಘಿಸಿ ಕಾರ್ಯಕ್ರಮಕ್ಕೆ ಅನುವು ಮಾಡಿ ಕೊಟ್ಟ ಕಾರಣಕ್ಕೆ ಕಾನೂನು ಕ್ರಮವನ್ನು ಜರಗಿಸಲು ಗ್ರಾಮಸ್ಥರು ಈ ಮೂಲಕ ವಿನಂತಿಸುರುತ್ತಾರೆ.