Published
5 months agoon
By
Akkare Newsಸಾಮ್ರಾಟ್ ಯುವಕ ಮಂಡಲ(ರಿ) ಬಿಳಿಯೂರು ಇದರ ನಿಯತಕಾಲಿಕ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉದಯ ಕುಮಾರ್ ಬಾಣಬೆಟ್ಟು ರವರು ಪೂರ್ಣಾನುಮತದಿಂದ ಆಯ್ಕೆಯಾಗುವುದರೊಂದಿಗೆ ಬಾಕೃಷ್ಣ ಗೌಡ ಕಾರ್ಯದರ್ಶಿಯಾಗಿ ಆಯ್ಕೆಗೊಂಡು ರಂಜಿತ್ ನಾಯ್ಕ್ ರವರು ಖಜಾoಚಿಯಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ವಿಕ್ರಂ ಮರ್ದೇಲು ಹಾಗೂ ಜತೆ ಕಾರ್ಯದರ್ಶಿಯಾಗಿ ರಾಕೇಶ್ ಪೂಜಾರಿ ಇವರುಗಳು ನೇಮಕಗೊಂಡರು. ಹಲವು ವರ್ಷಗಳಿಂದ ಸಾಮಾಜಿಕ ಜನೋಪಯೋಗಿ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಪಾಲು ಪಡೆಯುತ್ತಾ ಜನ ಮನ್ನಣೆಗೆ ಪಾತ್ರವಾಗಿರುವ ಯುವಕ ಮಂಡಲವು ಶ್ರೀಯುತ ಧನ್ಯ ಕುಮಾರ್ ರೈ ಬಿಳಿಯೂರು ಗುತ್ತು ಇವರ ಗೌರವಧ್ಯಕ್ಷತೆಯ ಮಾರ್ಗದರ್ಶನದೊಂದಿಗೆ ಮತ್ತು ಶ್ರೀ ಗಣೇಶ್ ರಾಜ್ ಬಿಳಿಯೂರು ಇವರ ಸಂಘಟನಾಶೀಲತೆಯೊಂದಿಗೆ, ಸ್ಥಾಪನಾಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ಬೆದ್ರ ಇವರ ಮುತುವರ್ಜಿಯಲ್ಲಿ ಮುಂದುವರಿದುಕೊಂಡು ಬಂದು ಇದೀಗ ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಂಡಿತು.