Published
5 months agoon
By
Akkare Newsಸುಂಟಿಕೊಪ್ಪ ಬಾಳೆಕಾಡು ಯುವಕರು ಮಂಗಳವಾರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕೊಡಗು ಎಸ್ಪಿ ಕೆ ರಾಮರಾಜನ್ ಮಾದ್ಯಮಕ್ಕೆ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿ ಇತ್ತೀಚಿಗೆ ವಾಹನ ಸವಾರರ ನಿರ್ಲಕ್ಷ್ಯಗಳಿಂದ ಹೆಚ್ಚು ಅಪಘಾತಗಳಾಗುತ್ತಿದ್ದು ಸಾವಿನ ಸಂಖ್ಯೆಯು ಹೆಚ್ಚಿದೆ, ಪೊಲೀಸ್ ಇಲಾಖೆಯಿಂದ ಎಷ್ಟೇ ರಸ್ತೆ ಸುರಕ್ಷತಾ ಅಭಿಯಾನಗಳನ್ನು ಮಾಡಿದ್ದರು, ಅದನ್ನು ಪಾಲನೆ ಮಾಡದಿರುವುದೇ ಇಂತಹ ದುರ್ಮರಣಗಳಿಗೆ ಕಾರಣ ಎಂದ ಅವರು ಯುವಕರು ತಮ್ಮ ನಿರ್ಲಕ್ಷ್ಯತನದಿಂದ ಸಾವನ್ನಪ್ಪುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಹೆಲ್ಮೆಟ್ ಧರಿಸಿದ್ದರೆ ಯುವಕರು ಬದುಕುಳಿಯುತ್ತಿದ್ದರು:
ಇಬ್ಬರು ಯುವಕರು ಹೆಲ್ಮೆಟ್ ಧರಿಸಿದ್ದೆ ಆದರೆ ಬದುಕುಳಿಯುಯ ಸಾಧ್ಯತೆ ಹೆಚ್ಚು ಇದ್ದು ಇಂತಹ ಘಟನೆಗಳಿಂದ ನನ್ನ ಮನಸಿಗೂ ಅತೀವ ನೋವುನ್ನುಂಟು ಮಾಡಿದೆ ಎಂದು ಎಸ್ಪಿ ರಾಮರಾಜನ್ ತಮ್ಮ ವಯುಕ್ತಿಕ ಭಾವನೆಯನ್ನು ಹಂಚಿಕೊಂಡಿದ್ದಾರೆ. ಇಬ್ಬರು ಯುವಕರ ತಲೆಭಾಗಕ್ಕೆ ಪೆಟ್ಟಾಗಿದ್ದು ಇಬ್ಬರು ೨೩ ವಯೋಮಿತಿಯುಳ್ಳಗಿದ್ದಾರೆ. ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೆ ಸಾಯುವ ಸಾಧ್ಯತೆ ಕಡಿಮೆ ಇತ್ತು ಎಂದು ಹೇಳಿದ್ದಾರೆ.
ತಪಾಸಣೆ ವೇಳೆ ಮಾತ್ರ ಹೆಲ್ಮೆಟ್ ಬಳಕೆ
ಪೊಲೀಸರು ವಾಹನ ತಪಾಸಣೆ ಮಾಡುವಾಗ ಮಾತ್ರ ವಾಹನ ಸವಾರರು ಸೀಟ್ ಬೆಲ್ಟ್ ಹಾಕುವುದು ಮತ್ತು ಹೆಲ್ಮೆಟ್ ಧರಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದಿರುವ ರಾಮರಾಜನ್ ಕೇವಲ ದಂಡವನ್ನು ಉಳಿಸಲು ಮಾತ್ರ ಕಾನೂನು ಪಾಲನೆಯಾಗುತ್ತಿದ್ದು ಮಿಕ್ಕಿದ ಸಂದರ್ಭಗಳಲ್ಲಿ ಅದೂ ಗ್ರಾಮೀಣ ಭಾಗದಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಇಂತ ಕಹಿ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಇಲಾಖೆಗೆ ಹೆಲ್ಮೆಟ್ ಅಲ್ಲ, ನಿಮ್ಮ ಜೀವಕ್ಕಾಗಿ ಹೆಲ್ಮೆಟ್
ಇಲಾಖೆಯ ಒಳಿತಿಗಾಗಿ ಹೆಲ್ಮೆಟ್ ಕಡ್ಡಾಯಗೊಳಿಸಿಲ್ಲ ಎಂದಿರುವ ರಾಮರಾಜನ್ ಸವಾರರ ಪ್ರಾಣವನ್ನು ರಕ್ಷಿಸುವ ನಿಟ್ಟಿನಲ್ಲಿಸರಕಾರ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ವಿನಃ ನಮ್ಮ ಒಳಿತಿಗಲ್ಲ ಎಂದು ಅವರ ಹೇಳಿದ್ದಾರೆ.
ಸಾರ್ವಜನಿಕರೇ ಸ್ವಯಂ ಎಚ್ಚೆತ್ತುಕೊಳ್ಳಬೇಕು:
ರಸ್ತೆ ಸುರಕ್ಷತೆ ಬಗ್ಗೆ ಪೊಲೀಸ್ ಇಲಾಖೆ ಆಗಿಂದಾಗೆ ಅಭಿಯಾನಗಳನ್ನು ಮಾಡುತ್ತಿದ್ದು ಅವುಗಳಿಂದ ಕೇವಲ ಶೇಕಡಾ ೨೦ರಷ್ಟು ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯವಿದ್ದು ಸಾರ್ವಜನಿಕರೇ ಜಾಗೃತರಾಗಿ ಮುಂದುವರೆದಲ್ಲಿ ಮಾತ್ರ ಅಪಘಾತಗಳು ಮತ್ತು ಅವುಗಳ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಹೆತ್ತವರಿಗೆ ಯಾರು ಉತ್ತರ ?
ಭವಿಷ್ಯದಲ್ಲಿ ಯಾವುದಾದರು ಉನ್ನತ ಹುದ್ದೆ ಅಲಂಕರಿಸಿ ಹೆತ್ತವರನ್ನು ನೋಡಿಕೊಳ್ಳಬೇಕಾದ ಯುವಕರು ಹೀಗೆ ಆದರೆ ಆ ಕುಟುಂಬಗಳಿಗೆ ಯಾರು ಉತ್ತರ ಎಂದ ಎಸ್ಪಿ ರಾಮರಾಜನ್ ಹೆತ್ತವರು ಕೂಡ ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳುವಳಿಕೆ ನೀಡದೆ ಹೋದಲ್ಲಿ ಸಾವುನೋವಿನ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.