Published
5 months agoon
By
Akkare Newsಮಂಗಳೂರು: ಕರ್ನಾಟಕ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ದೇವಾಲಯಗಳಿಗೆ ವ್ಯವಸ್ಥಾಪಕನ ಸಮಿತಿ ನಿರ್ಮಾಣ ಸುತ್ತೋಲೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಮೊದಲ ಸಭೆಯನ್ನು ನಡೆದಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಲವಾರು ಪ್ರಮುಖ ಚರ್ಚೆಗಳು ನಡೆದಿದೆ.
ವ್ಯವಸ್ಥಾಪನ ಸಮಿತಿಯ ಅವಧಿ ಮುಕ್ತಾಯಗೊಂಡಿರುವ ವರ್ಗ ಬಿ ಮತ್ತು ಸಿ ಗೆ ಸೇರಿದ ದೇವಸ್ಥಾನಗಳಿಗೆ ಹೊಸದಾಗಿ ವ್ಯವಸ್ಥಾಪನ ಸಮಿತಿ ರಚಿಸುವ ಕುರಿತು ನಿರ್ಣಯ ಅಂಗೀಕಾರವಾಗಿದೆ. ದೇವಸ್ಥಾನಗಳ ಹೆಸರು ಬದಲಾವಣೆ ಅಥವಾ ತಿದ್ದುಪಡಿಯಿದ್ದರೆ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನಗಳಿಗೆ ಮಾಹಿತಿ ನೀಡಿ ಮಾಹಿತಿ ಪಡೆದುಕೊಂಡು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದಾಗಿ ಘೋಷಣೆಯಾಗಿದೆ.