Published
5 months agoon
By
Akkare Newsಪುತ್ತೂರು: ಬನ್ನೂರು ಕೃಷ್ಣನಗರದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಗುರು ಪೂರ್ಣಿಮೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಸಂದರ್ಶಕ ಉಪನ್ಯಾಸಕರಾದ ಶ್ರೀ ಪೂರ್ಣಾತ್ಮರಾಮ ಅವರು ಪಾಲ್ಗೊಂಡಿದ್ದು ಗುರು ಪೂರ್ಣಿಮೆಯ ಮಹತ್ವ ಹಾಗೂ ವೇದವ್ಯಾಸರ ಪರಿಪೂರ್ಣ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮಿ ಕೆ ಅವರನ್ನು ಶಾಲೆಯ ಸಂಚಾಲಕರಾದ ಶ್ರೀಯುತ ಎ.ವಿ. ನಾರಾಯಣ ಹಾಗೂ ಶ್ರೀಮತಿ ಪ್ರತಿಭಾ ದೇವಿ ದಂಪತಿಗಳು ಗೌರವಿಸಿ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಶ್ರೀಮತಿ ಜಯಲಕ್ಷ್ಮಿ ರವರು ಮಾತನಾಡಿ ಗುರು ಹಾಗೂ ಶಿಷ್ಯರ ಸಂಬಂಧದ ಬಗ್ಗೆ ಶಿಕ್ಷಣ ಸಂಸ್ಥೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಎ. ವಿ. ನಾರಾಯಣರವರು ವಹಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಯುತ ಗುಡ್ಡಪ್ಪ ಗೌಡ ಬಲ್ಯ ಹಾಗೂ ಉಪಾಧ್ಯಕ್ಷರಾದ ಶ್ರೀಯುತ ಉಮೇಶ್ ಮಳುವೇಲು ರವರು ಉಪಸ್ಥಿತರಿದ್ದರು.
ಎವಿಜಿ ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂಸ್ಥೆಯ ಗುರುವೃಂದದವರಿಗೆ ಪ್ರಣಾಮವನ್ನು ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ, ಗಂಗಾಧರ ಗೌಡ, ಶ್ರೀಮತಿ ಪ್ರತಿಭಾ ದೇವಿ, ಶ್ರೀ ವಾಮನ ಗೌಡ ಹಾಗೂ ಸಂಸ್ಥೆಯ ಹಿತೈಷಿ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ವಾರಿಜ ಕಾಣಿಚ್ಚಾರು ಶಿಕ್ಷಕವೃಂದ ಬೋಧಕೇತರ ವೃಂದ ಪೋಷಕವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಕಿಯರಾದ ಹರ್ಷಿತರವರು ಪ್ರಾರ್ಥಿಸಿ ಶ್ರೀಮತಿ ರಾಧಾ ರವರು ಸ್ವಾಗತಿಸಿದರು. ಶ್ರೀಮತಿ ರಂಜಿತಾ ರೈ ಅವರು ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು. ಶ್ರೀ ಉಮೇಶ್ ಮಳುವೇಲು ರವರು ವಂದನಾರ್ಪಣೆ ಗೈದು ಶ್ರೀಮತಿ ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀ ಉಮೇಶ್ ಮಳುವೇಲು ರವರು ವಂದನಾರ್ಪಣೆ ಗೈದು ಶ್ರೀಮತಿ ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು.