Published
5 months agoon
By
Akkare Newsಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಬೃಹತ್ ಗಾತ್ರದ ಮರವೊಂದು ಹೆದ್ದಾರಿಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಜು.26ರಂದು ನಡೆದಿದೆ.
ಮುಕ್ರಂಪಾಡಿ ಬಳಿಯ ಮೊಟ್ಟತ್ತಡ್ಕ ತಿರುವಿನಲ್ಲಿ ಮರ ಬಿದ್ದಿದ್ದು ಪರಿಣಾಮ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಸುಮಾರು ಅರ್ಧ ಗಂಟೆ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಮರ ಬೀಳುವ ಸಂದರ್ಭದಲ್ಲಿ ಖಾಸಗಿ ಬಸ್ವೊಂದು ಮುಕ್ರಂಪಾಡಿ ತಲುಪಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕ ದಳದವರು ಮತ್ತು ಮೆಸ್ಕಾಂ ಇಲಾಖೆಯವರು ಮರವನ್ನು ತೆರವುಗೊಳಿಸಿ ಸುಮಗ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.