Published
5 months agoon
By
Akkare Newsಪುತ್ತೂರು: ಕಾರ್ಗಿಲ್ 25 ನೇ ವಿಜಯೋತ್ಸವ ಕಾರ್ಯಕ್ರಮ ಮತ್ತು ಸನ್ಮಾನಕಾರ್ಯಕ್ರಮ ಪುತ್ತೂರು ಕಾವು ಲಯನ್ಸ್ಕ್ಲಬ್ ನಿಂದ ಕಾವಿನಲ್ಲಿರುವ ಕ್ಲಬ್ ಕಚೇರಿಯಲ್ಲಿನಡೆಯಿತು.
ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಪುತ್ತೂರು ಕಾವು ಲಯನ್ಸ್ ಕ್ಲಬ್ ವತಿಯಿಂದ ಮಾಡಾವು ಬೊಳಿಕ್ಕಳ ನಿವಾಸಿ ನಿವೃತ್ತ ಸೇನಾನಿ ಬೋಳೋಡಿ ರಮೇಶ್ ರೈ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರು ಗುತ್ತು ಜಗನ್ನಾಥ ರೈ , ಕೋಶಾಧಿಕಾರಿ ಕೆ ಕೆ ಇಬ್ರಾಹಿಂ ಹಾಜಿ, ಪುತ್ತೂರು ಕಾವು ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರು ಎ ಹೇಮನಾಥ್ ಶೆಟ್ಟಿ ಕಾವು,ಮತ್ತು ಪ್ರಾಂತೀಯ ಅಧ್ಯಕ್ಷ ಲ.ಪಾವನ ರಾಮ, ಲ.ದೇವಣ್ಣ ರೈ ಮುದರಪಲ್ಲ, ಲ.ದಿನೇಶ್ ಗೌಡ ಆಮ್ಚಿನಡ್ಕ, ಲ.ಅಮ್ಮು ರೈ ಅಂಕೊತ್ತಿಮಾರ್, ರಮೇಶ್ ರೈ ಸಹೋದರರಾದ ಭಾಸ್ಕರ್ ರೈಮತ್ತು ಚಂದ್ರಹಾಸ್ ರೈ ಉಪಸ್ಥಿತರಿದ್ದರು.