Published
10 months agoon
By
Akkare Newsಶಿರಾಡಿ ಘಾಟಿನಲ್ಲಿ ರೈಲ್ವೇ ಮಾರ್ಗದಲ್ಲಿ ಮಣ್ಣು ಕುಸಿತ ಉಂಟಾಗಿದ್ದು, ಮಂಗಳೂರು- ಬೆಂಗಳೂರು ರೈಲು ಸಂಪರ್ಕ ಸ್ಥಗಿತಗೊಂಡಿದೆ.
ಸುಬ್ರಹ್ಮಣ್ಯ-ಎಡಕುಮೇರಿ ಮಾರ್ಗ ಮಧ್ಯದ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದ ಕೆಳಗಿನಿಂದ ಮಣ್ಣು ಕುಸಿದಿದೆ ಎಂದು ಹೇಳಲಾಗಿದೆ.
ಸಂಜೆ 5.30ರ ಸುಮಾರಿಗೆ ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಹೊರಟ ವಿಜಯಪುರ ಎಕ್ಸ್‌ಪ್ರೆಸ್ ರೈಲು ವಾಪಾಸ್ಸು ಸುಬ್ರಹ್ಮಣ್ಯ ನಿಲ್ದಾಣಕ್ಕೆ ಬಂದಿದೆನ್ನಲಾಗಿದೆ. ನಂತರ ಯಾವುದೇ ರೈಲು ಸಂಪರ್ಕ ಇಲ್ಲವಾಗಿದೆ.