Published
5 months agoon
By
Akkare Newsಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು,ರಾಜ್ಯಾದ್ಯಂತ (Karnataka) ವಾಹನ ಚಾಲಕರು ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಚಲಾಯಿಸಿದರೆ ವಾಹನ ಮಾಲೀಕರ ಮೇಲೆ ಎಫ್.ಐ.ಆರ್ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದುವರೆಗೆ ಸರ್ಕಾರ ನಿಗದಿಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಚಾಲಕರಿಗೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಆ ನಿಯಮದೊಂದಿಗೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಎ. ಡಿ. ಜಿ.ಪಿ ಅಲೋಕ್ ಮೋಹನ್ ಅವರು ಹೇಳಿದ ನಿಯಮ ಉಲ್ಲಂಘಸಿದರೆ ಆಗಸ್ಟ್ 1 ರಿಂದ ದಂಡದ ಜೊತೆ ಪ್ರಕರಣ ಸಹ ದಾಖಲಿಸಲಾಗುವುದು ಎಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ(Bengaluru-Mysuru Expressway)ಯಲ್ಲಿ ಪ್ರಸ್ತುತ ವಾಹನ ಚಾಲಕರ ಅತೀಯಾದ ವೇಗದ ವಾಹನ ಓಡಾಟದಿಂದ ಭಾರೀ ಸಂಖ್ಯೆಯಲ್ಲಿ ಅಪಘಾತವಾಗುತ್ತಿದೆ. ಈ ಕಾರಣಕ್ಕಾಗಿ ಈಗ ವೇಗದ ಮಿತಿಯನ್ನು ಎ.ಡಿ.ಜಿ.ಪಿ ಅಲೋಕ್ ಮೋಹನ್ ಹೊರಡಿಸಿದ್ದಾರೆ.ಗರಿಷ್ಠ ವಾಗಿ ಗಂಟೆಗೆ 100 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿದೆ.ಒಂದು ವೇಳೆ ಗಂಟೆಗೆ 105 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ. ರಸ್ತೆಯಲ್ಲಿ ಅಳವಡಿಸಿರುವ ಎಐ ಕ್ಯಾಮೆರಾ ಕ್ಲಿಕ್ಕಿಸಿದ ಫೋಟೋ ದಲ್ಲಿ ತನಿಖೆಯ ಆಧಾರದ ಮೇಲೆ ವಾಹನ ಮಾಲೀಕರಿಗೆ ದಂಡದ ನೋಟಿಸ್ ಕಳುಹಿಸಲಾಗುತ್ತದೆ ಎಂದು ಅಲೋಕ್ ಮೋಹನ್ ಅವರು ಹೇಳಿದ್ದಾರೆ.
ಅಲೋಕ್ ಕುಮಾರ್ ಹೇಳಿದ್ದೇನು?
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ 155 ಮಂದಿ ಗಂಟೆಗೆ 130 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಸಂಚರಿಸಿದ್ದಾರೆ. ಅತಿವೇಗದ ವಾಹನ ಚಾಲನೆ 90% ರಷ್ಟು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತದೆ ಆದರಿಂದ ಇನ್ನು ಮುಂದೆ ಆಗಸ್ಟ್ 1 ರಿಂದ ಕರ್ನಾಟಕದಲ್ಲಿ 130 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಿದರೆ ಎಫ್ಐಆರ್ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಏನಿದು ತಂತ್ರಜ್ಞಾನ?
ಎಕ್ಸ್ಪ್ರೆಸ್ವೇಯಲ್ಲಿ ಅತೀಯಾದ ವೇಗದ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ತಂತ್ರಜ್ಞಾನದ ಸಹಾಯದ ಮೂಲಕ ಎಐ ಕ್ಯಾಮೆರಾ ರಸ್ತೆಗಳಿಗೆ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಖಡಕ್ ಆದೇಶ ಹೊರಸಿದ್ದಾರೆ.
ಅಪಘಾತ ಇಳಿಕೆ:
ಎಕ್ಸ್ಪ್ರೆಸ್ವೇ ನಲ್ಲಿ ವಾಹನ ಚಾಲಕರ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ ನಿಗದಿ ಪಡಿಸಲಾಗಿದೆ. ಇದನ್ನು ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವೇಗ ಮಿತಿ ದಾಟಿದರೆ 1000 ರೂ. ದಂಡ ವಿಧಿಸಲಾಗುತ್ತದೆ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮ ಪೊಲೀಸರು ತೆಗುಕೊಳ್ಳುತ್ತಾರೆ. ಎಂದು ಅಲೋಕ್ ಮೋಹನ್ ಹೇಳಿದ್ದಾರೆ. ವೇಗದ ಮಿತಿ ಮೀರಿ ನಿಯಮ ಉಲ್ಲಂಘನೆ ಮಾಡಿದರೆ ಫೋಟೋ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ.
ಈ ತಂತ್ರಜ್ಞಾನ ಅಳವಡಿಸಿದ ನಂತರ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎಂಬ ಒಳ್ಳೆಯ ಉದ್ದೇಶದಿಂದ ಎಡಿಜಿಪಿ ಅಲೋಕ್ ಮೊಹನ್ ರಾಜ್ಯಾದ್ಯಂತ (Karnataka)ಈ ನಿಯಮವನ್ನು ಹೊರಡಿಸಿದ್ದಾರೆ.