Published
10 months agoon
By
Akkare Newsರಾಜ್ಯದಲ್ಲಿ ಸುರಿಯುವ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡಗಾಡುಗಳು ಕುಸಿಯುತ್ತಿವೆ. ಶಿರಾಡಿ ಘಾಟ್ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತವಾಗಿದೆ. ಇದೀಗ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಗಂಟೆಗಟ್ಟಲೆ ಕಿಲೋಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಂತಿದೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಚಲಿಸುತ್ತಿದ್ದ ಕಾರು ,ಲಾರಿ,ಗ್ಯಾಸ್ ಟ್ಯಾಂಕರ್ ಮೇಲೆ ಗುಡ್ಡ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದಿದೆ .ಇಂದು ಮತ್ತೊಮ್ಮೆ ಗುಡ್ಡ ಕುಸಿತದಿಂದ ಶಿರಾಡಿಘಾಟ್ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.ಸಂಚಾರ ದಟ್ಟಣೆ ಆಗುವ ಹಿನ್ನೆಲೆ ಕೆಲಹೊತ್ತು ಸಕಲೇಶಪುರ ಹಾದಿಯಲ್ಲಿ ವಾಹನ ಸವಾರರು ಸಂಚರಿಸಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮನವಿಮಾಡಿದ್ದಾರೆ.
ಗಂಟೆಗಟ್ಟಲೆ ಸಾಲು ನಿಂತ ವಾಹನಳಿಂದ ರೋಡ್ ಬ್ಲಾಕ್ ಆಗಿದ್ದು ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು ಮಣ್ಣು ತೆರವು ಮಾಡುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.