Published
1 year agoon
By
Akkare Newsಕಲಬುರಗಿ : ಪೊಲೀಸ್ ಕಾನ್ಸ್ ಟೇಬಲ್ ಒಬ್ಬರ ನಿರ್ಮಾಣ ಹಂತದ ಮನೆಗೆ ನುಗ್ಗಿದ ಕಳ್ಳರು 40,500 ರೂ. ಮೌಲ್ಯದ ಸಾಮಗ್ರಿ ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದ ಸಿದ್ದಿಕಿ ಲೇಔಟ್ ನಡೆದಿದೆ.
ರಮೇಶ ವಾಲಿಕಾರ ಅವರು ಸಿದ್ದಕಿ ಲೇಔಟ್ ನಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿದ್ದು, ಮನೆಯ ಒಂದು ಕೋಣೆಗೆ ಬಾಗಿಲು ಕೊಡಿಸಿ ಅದರಲ್ಲಿ ಕಟ್ಟಡ ನಿರ್ಮಾಣ ಕ್ಕೆ ಬೇಕಾದ ಸಾಮಾಗ್ರಿಗಳನ್ನು ಇಡಲಾಗಿತ್ತು.
ಕೋಣೆಗೆ ಬೀಗ ಮುರಿದು ಕಳ್ಳರು 1,500ರೂ. ಮೌಲ್ಯದ ಒಂದು ಗೋಡೆ ಕೊರೆಯುವ ಮೆಷಿನ್,100ರೂ. ಮೌಲ್ಯದ ಒಂದು ಡ್ರಿಲ್ ಮಷಿನ್, 4 ಸಾವಿರ ರೂ ಮೌಲ್ಯದ ಒಂದು ಕಟ್ಟರ್ ಮೆಷಿನ್, 5ಸಾವಿರ ರೂ ಮೌಲ್ಯದ ಎರಡು ಟೈಲ್ಸ್ ಕಟ್ ಮಾಡುವ ಮೇಷಿನ್, 7 ಸಾವಿರ ರೂ. ಮೌಲ್ಯದ ಪಂಪ್ ಸೆಟ್,12ಸಾವಿರ ರೂ 7 ಬಂಡ್ ವೈರ್, 15 ಸಾವಿರ ರೂ. ಮೌಲ್ಯದ ಪಂಬ್ಲಸ್ ಸಾಮಗ್ರಿ ಸೇರಿ 40,500ರೂ.ಮೌಲ್ಯದ ಸಾಮಾನುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.