Published
5 months agoon
By
Akkare Newsಜಾರಿ ಬಿದ್ದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಕಾಲು ಹಾಗು ಸೊಂಟಕ್ಕೆ ಗಾಯವಾಗಿರುವುದರಿಂದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಾಸಕರ ಕ್ಷೇತ್ರದ ಪ್ರವಾಸವನ್ನು ರದ್ದು ಮಾಡಲಾಗಿದೆ ಎಂದು ಶಾಸಕರ ಕಚೇರಿ ಮೂಲಗಳು ಅಧಿಕೃತವಾಗಿ ತಿಳಿಸಿದೆ.
ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಯಾದ ಪ್ರದೇಶಗಳಿಗೆ ಬಿಜೆಪಿ ವಿಪಕ್ಷ ನಾಯಕ ಆರ್.ಆಶೋಕ್ ಅವರು ಬಂಟ್ವಾಳಕ್ಕೆ ಆಗಮಿಸಿದ ದಿನದಂದು ಬೆಳಿಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರು ಬಿದ್ದು ಕಾಲಿಗೆ ಹಾಗೂ ಸೊಂಟಕ್ಕೆ ಗಾಯವಾಗಿತ್ತು. ಅದೇ ದಿನ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಕಾಲಿನ ಬೆರಳಿಗೆ ಹೊಲಿಗೆ ಹಾಕಲಾಗಿತ್ತು.
ವೈದ್ಯರ ಸಲಹೆಯ ಮೇರೆಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಎಕ್ಸರೇ ನಡೆಸಿದ ಮೂಲೆ ತಜ್ಞ ಡಾ| ಅಜಿತ್ ಕುಮಾರ್ ರೈ ಅವರು ಕಾಲಿನ ಬಿರಕು ಬಗ್ಗೆ ಮಾಹಿತಿ ನೀಡಿ, ಮುಂದಿನ ನಾಲ್ಕು ವಾರಗಳ ಕಾಲ ನಡೆದಾಡದೆ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಅನಾರೋಗ್ಯದ ಕಾರಣದಿಂದ ಮುಂದಿನ ನಾಲ್ಕು ವಾರಗಳ ಕಾಲ ಶಾಸಕರು ಸಾರ್ವಜನಿಕರ ಸಂಪರ್ಕಕ್ಕೆ ಸಿಗಲು ಕಷ್ಟಸಾಧ್ಯ ಎಂದು ಕಚೇರಿ ಮೂಲಗಳು ತಿಳಿಸಿವೆ. ಅಗತ್ಯವಿರುವ ಕೆಲಸಗಳಿಗೆ ಪೋನ್ ಮೂಲಕ ಸಂಪರ್ಕ ಮಾಡುವಂತೆ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕ ಮಾಡಲು ಕೋರಿದ್ದಾರೆ.