Published
5 months agoon
By
Akkare Newsಈ ವರ್ಷ ಶೂನ್ಯ ದಾಖಲಾತಿ ಹಾಗೂ ಅತಿ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಯಿಂದಾಗಿ ರಾಜ್ಯದ 4398 ಸರಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ರಾಜ್ಯದಲ್ಲಿನ 46 ಸಾವಿರ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪೈಕಿ ಸುಮಾರು 18 ಸಾವಿರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 30 ದಾಟಿಲ್ಲ. ಇನ್ನೂ ಆಶ್ಚರ್ಯವೆಂದರೆ 4300 ಕ್ಕೂ ಹೆಚ್ಚು ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇದರಲ್ಲಿ ಶೂನ್ಯ ದಾಖಲಾತಿಯ ಶಾಲೆಗಳು ಇವೆ.
ಈ ಹಿಂದೆ 10 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಮತ್ತೊಂದು ಶಾಲೆಯಲ್ಲಿ ವಿಲೀನ ಮಾಡುವ ಮೂಲಕ ಒಂದು ಶಾಲೆಯನ್ನು ಸರಕಾರ ಶಾಶ್ವತವಾಗಿ ಮುಚ್ಚುತ್ತಿತ್ತು. ಇದೀಗ 4300 ಶಾಲೆಯ ವಿದ್ಯಾರ್ಥಿಗಳು, ಪೋಷಕರಿಗೆ ಅದೇ ಆತಂಕ ಎದುರಾಗಿದೆ.
2020 ರ ಅವಧಿಯಲ್ಲಿ ಶೂನ್ಯದಿಂದ 10 ಮಕ್ಕಳಿರುವ ಶಾಲೆಗಳ ಸಂಖ್ಯೆ 1810 ಇತ್ತು. 2023 ರಲ್ಲಿ ಅದು 3646 ಏರಿಕೆಯಾಗಿತ್ತು. ಈ ವರ್ಷ ಅದು 4398 ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 700 ಕ್ಕೂ ಹೆಚ್ಚು ಶಾಲೆಗಳಲ್ಲಿ ದಾಖಲಾತಿ ತೀವ್ರ ಕುಸಿತಕ್ಕೆ ಒಳಗಾಗಿದೆ.
‘ಈ ಪೈಕಿ ಹಾಸನದಲ್ಲಿ ಅತಿ ಹೆಚ್ಚು 490 ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ, 696 ಶಾಲೆಗಳಲ್ಲಿ 20 ಕ್ಕಿಂತ ಕಡಿಮೆ ದಾಖಲಾತಿ ಇದೆ.
347 ಶಾಲೆಗಳಲ್ಲಿ 30 ಕ್ಕಿಂತ ಕಡಿಮೆ ದಾಖಲಾತಿ ಇದೆ. ನಂತರದ ಸ್ಥಾನ ತುಮಕೂರು. ಕಡಿಮೆ ದಾಖಲಾತಿ ಶಾಲೆಗಳ ಸಂಖ್ಯೆ 1300 ರಷ್ಟಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.