Published
5 months agoon
By
Akkare Newsಪುತ್ತೂರು: ನಗರಸಭೆಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಿದೆ.ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಿಡಲಾಗಿದೆ.
ಕರ್ನಾಟಕ ಪುರಸಭೆಗಳ ಕಾಯಿದೆ, 1964ರ ಸೆಕ್ಷನ್ 42ರ ಪ್ರಕಾರ ಮತ್ತು ಕರ್ನಾಟಕದ ನಿಯಮ 13-ಎ ಮತ್ತು 13ರ ಅಡಿಯಲ್ಲಿ ಕರ್ನಾಟಕದ 44 ನಗರ/ ಪುರಸಭೆಯ ಕೌನ್ಸಿಲ್‌ಗೆ ಸಂಬಂಧಿಸಿದಂತೆ ಹತ್ತನೇ ಅವಧಿಗೆ ವಿವಿಧ ವರ್ಗಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿ ಚುನಾವಣೆ (ತಿದ್ದುಪಡಿ) ನಿಯಮಗಳು,2024ರ ಆದೇಶ ಸಂಖ್ಯೆ UDD 10 MLR 2024ರ ಪ್ರಕಾರ ಆದೇಶ ಹೊರಡಿಸಿದೆ.
ಪುತ್ತೂರಿನ ನಗರ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಸಿ ಎಸ್ ಮತ್ತು ಲೀಲಾವತಿ ಅವರು ಸಮೀಪದಲ್ಲಿದ್ದರೆ. ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರಿಗೂ ಅರ್ಹತೆ ಇದೆ ಎಂದು ತಿಳಿದುಬಂದಿದೆ.
‘