Published
5 months agoon
By
Akkare Newsಕುಕ್ಕೆ ಸುಬ್ರಹ್ಮಣ್ಯ :ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ವನದುರ್ಗ ದೇವಿ ದೇವಸ್ಥಾನದ ಬಳಿ ವಿದ್ಯುತ್ ಕಂಬದಲ್ಲಿ ಜಾಹೀರಾತು ಫಲಕ ಪ್ರತ್ಯಕ್ಷಗೊಂಡಿತ್ತು.
ವಿದ್ಯುತ್ ಕಂಬದಲ್ಲಿ ಪ್ರದರ್ಶಿಸಲು ಅನುಮತಿ ಕೊಟ್ಟವರಾರು ಎಂಬ ಒಕ್ಕಣೆಯೊಂದಿಗೆ ಕಡಬ ಟೈಮ್ಸ್ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಇದೀಗ ವರದಿ ಪ್ರಕಟಿಸಿದ ಕೆಲವೇ ಹೊತ್ತಲ್ಲಿ ಕರೆಂಟು ಕಂಬದಲ್ಲಿದ್ದ ಜಾಹೀರಾತು ಫಲಕವನ್ನು ಕಿತ್ತೆಸೆದಿದ್ದಾರೆ.
ಮೆಸ್ಕಾಂ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ ನಮ್ಮ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ, ಗಮನಕ್ಕೆ ಬಂದ ಕೂಡಲೇ ಜಾಹೀರಾತು ಫಲಕವನ್ನು ತೆರವು ಮಾಡಿರುವುದಾಗಿ ತಿಳಿಸಿದ್ದಾರೆ.
ನಿರ್ದಿಷ್ಟ ಸ್ಥಳದಲ್ಲಿ ಜಾಹೀರಾತು ಹಾಕಲು ಗ್ರಾ.ಪಂ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಆದರೆ ಬಟ್ಟೆ ಮಳಿಗೆಯೊಂದು ತನ್ನ ಜಾಹೀರಾತನ್ನು ವಿದ್ಯುತ್ ಕಂಬದಲ್ಲಿ ಹಾಕಲಾಗಿತ್ತು.
‘
ನಿರಂತರ ಸುರಿಯುವ ಮಳೆಗೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಮುಂಜಾಗೃತವಾಗಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.