ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಪುತ್ತೂರು ನಗರಸಭೆಗೆ ತ್ಯಾಜ್ಯ ಸಂಗ್ರಹಿಸಲು ನೂತನ ಸಿಎನ್‌ಜಿ ಆಧಾರಿತ 2 ವಾಹನಗಳಿಗೆ ಚಾಲನೆ

Published

on

ತಿಂಗಳೊಳಗೆ ಸಿಎನ್‌ಜಿ ಘಟಕವೇ ಕಾರ್ಯಾಚರಣೆಗೆ ಬರಲಿದೆ – ಅಶೋಕ್ ಕುಮಾರ್ ರೈ
ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹದಲ್ಲಿ “ಪರಿಸರ ಸ್ನೇಹಿ’ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ನಗರಸಭೆಯು ಸ್ವಚ್ಛಭಾರತ್‌ ಯೋಜನೆಯಡಿಯಲ್ಲಿ ಸಿಎನ್‌ಜಿ ಆಧಾರಿತ 2 ವಾಹನಗಳನ್ನು ರಸ್ತೆಗೆ ಇಳಿಸಿದೆ.

ಆ.6 ರಂದು ಶಾಸಕ ಅಶೋಕ್‌ ಕುಮಾ‌ರ್ ರೈ ಅವರು ನೂತನ ವಾಹನಗಳಿಗೆ ಹಸಿರು ನೀಶಾನೆ ತೋರಿಸಿ ಚಾಲನೆ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರು ತೆಂಗಿನ ಕಾಯಿ ಒಡೆದು ನೂತನ ವಾಹನಳಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿ ಮಾತನಾಡಿ ಇಲ್ಲಿನ ತನಕ ಸುಮಾರು 18 ಡೀಸೆಲ್ ವಾಹನಗಳು ಕಾರ್ಯಾಚರಿಸುತ್ತಿತ್ತು.

 

ಇದೀಗ 2 ಹೆಚ್ಚುವರಿಯಾಗಿ ಒಟ್ಟು 20 ವಾಹನಗಳು ಕಸ ಸಂಗ್ರಹ ವಿಲೇವಾರಿ ಮಾಡಲಿದೆ. ಇದೀಗ ಸಿಎನ್‌ಜಿ ಇರುವ ವಾಹನ ನಗರಸಭೆ ಖರೀದಿಸಿದ್ದು, ಮುಂದೆ ಸಿಎನ್‌ಜಿ ತುಂಬಿಸಲು ತಿಂಗಳೊಳಗೆ ಬನ್ನೂರಿನಲ್ಲಿ ಸಿಎನ್‌ಜಿ ಉತ್ಪಾದನಾ ಘಟಕವೇ ಕಾರ್ಯಾಚರಣೆಗೆ ಬರಲಿದೆ.

ಇಲ್ಲಿ ನಗರಸಭೆ ಕಸ ವಿಲೇವಾರಿ ವಾಹನಕ್ಕೆ ಗ್ಯಾಸ್‌ ಬಳಸಿ ಹೆಚ್ಚುವರಿ ಸಿಎನ್‌ಜಿಯನ್ನು ಮಾರುಕಟ್ಟೆಗೆ ವ್ಯವಸ್ಥೆ ನಡೆಯಲಿದೆ. ಒಟ್ಟಿನಲ್ಲಿ ಪುತ್ತೂರು ನಗರಸಭೆಯಲ್ಲಿ ಸ್ವಚ್ಛತೆಗೆ ಅತ್ಯಂತ ಪ್ರಾಮುಖ್ಯತೆ ಕೊಡಬೇಕು. ಪುತ್ತೂರಿನಲ್ಲಿ ಲೇ ಔಟ್‌ಗಳು, ಇಂಡಸ್ಟ್ರೀಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಸ ಸಂಗ್ರಹಕ್ಕೆ ಇನ್ನೂ ಹೆಚ್ಚಿನ ವಾಹನ ಬೇಕಾದಲ್ಲಿ ಖರೀದಿಸಲಾಗುವುದು.

ಕಸ ವಿಲೇವಾರಿ ಅತ್ಯಂತ ಚಾಲೆಂಜಿಗ್ ಕೆಲಸ. ಇದಕ್ಕೆ ಯಾವುದೇ ಲೋಪ ಆಗದಂತೆ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ. ನಗರಸಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ನಗರಸಭೆ ಸದಸ್ಯರಾದ ಯೂಸೂಪ್ ಡ್ರಿಮ್, ಮಹಮ್ಮದ್ ರಿಯಾಜ್ ಪರ್ಲಡ್ಕ, ಶೈಲಾ ಪೈ, ಬಾಲಚಂದ್ರ, ರಾಬಿನ್ ತಾವೋ, ದಿನೇಶ್ ಶೇವಿರೆ, ಮಾಜಿ ಸದಸ್ಯ ಮುಕೇಶ್‌, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬೀರನಾಥ್ ರೈ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಸಮುದಾಯ ವ್ಯವಹಾರ ಅಧಿಕಾರಿ ಕರುಣಾಕರ, ನಗರಸಭೆ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

 

ಒಂದು ವಾಹನದಿಂದ ವಾರ್ಷಿಕ ಶೇ.50 ರೂ.ಉಳಿತಾಯ:
ಡೀಸೆಲ್ ಆಧಾರಿತ ವಾಹನಗಳು ಉಗುಳುವ ಹೊಗೆ ಪರಿಸರಕ್ಕೆ ಅತ್ಯಂತ ಮಾರಕ. ಆದರೆ, ಸಿಎನ್‌ಜಿ ಯಾವುದೇ ಹಾನಿಕಾರಕ ಅಂಶಗಳನ್ನು ಹೊರಸೂಸುವುದಿಲ್ಲ.

ಡಿಸೇಲ್ ಖರ್ಚು ಹೆಚ್ಚು. ಜತೆಗೆ ನಿರ್ವಹಣೆ ವೆಚ್ಚ ಕೂಡ ಅಧಿಕ. ಆದರೆ, ಸಿಎನ್ ಜಿಯಲ್ಲಿ ಈ ಕಿರಿಕಿರಿ ಇರುವುದಿಲ್ಲ. ಡೀಸೆಲ್‌ಗೆ ಹೋಲಿಸಿದರೆ, ಮೈಲೇಜ್ ಕೂಡ ಅಧಿಕ. ಒಂದು ಸಿಎನ್‌ಜಿ ವಾಹನ ಬಳಸುವುದರಿಂದ ನಗರಸಭೆಗೆ ವಾರ್ಷಿಕವಾಗಿ ಶೇ.50 ರೂಪಾಯಿಯಷ್ಟು ಉಳಿತಾಯವಾಗಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ವಾಹನಗಳನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಸಿದರೆ ಕೋಟ್ಯಂತರ ರೂ. ಉಳಿತಾಯವಾಗಲಿದೆ.

ಇದಕ್ಕೆ ಪೂರಕವಾಗಿ ರಾಜ್ಯದಲ್ಲೇ ಪ್ರಥಮ ಭಾರಿಗೆ ಪುತ್ತೂರು ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬಯೋ ಸಿಎನ್‌ಜಿ ಉತ್ಪಾದನಾ ಘಟಕ ಪ್ರಾರಂಭಗೊಂಡಿದೆ. ಪರೀಕ್ಷಾ ಹಂತದಲ್ಲಿದೆ. ಮುಂದೆ ಇಲ್ಲಿಂದಲೇ ಸಿಎನ್‌ಜಿ ಗ್ಯಾಸ್ ಅನ್ನು ನಗರಸಭೆ ಘನತ್ಯಾಜ್ಯ ವಾಹನಕ್ಕೆ ಉಪಯೋಗಿಸಲಾಗುವುದು.
ಮಧು ಎಸ್ ಮನೋಹರ್ ಪೌರಾಯುಕ್ತರು ನಗರಸಭೆ ಪುತ್ತೂರು

 

Continue Reading
Click to comment

Leave a Reply

Your email address will not be published. Required fields are marked *

Advertisement