ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಗುಂಡ್ಯ ಬಳಿ ಕಾರಿನ ಮೇಲೆಯೇ ಮಗುಚಿ ಬಿದ್ದ ಬೃಹತ್ ಗಾತ್ರದ ಕಂಟೇನರ್ ಲಾರಿ

Published

on

ಕುಕ್ಕೆ ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿ ಕಂಟೇನರ್ ಲಾರಿಯೊಂದು ಕಾರಿನ ಮೇಲೆಯೇ ಮಗುಚಿ ಬಿದ್ದ ಘಟನೆ ವರದಿಯಾಗಿದೆ.

ಗುಂಡ್ಯದ ಸಮೀಪ ಬರ್ಚಿನಹಳ್ಳ ಎಂಬಲ್ಲಿ ಈ ಘಟನೆ ನಡೆದಿದ್ದು ಸಿಫ್ಟ್ ಕಾರ್ ಮೇಲೆ ಕಂಟೇನರ್ ಮಗುಚಿ ಬಿದ್ದಿದ್ದು ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ.

 

ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ವಾಂತಿ ಬಂತೆಂದು ಕಾರು ರಸ್ತೆ ಬದಿ ನಿಲ್ಲಿಸಿ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ದೊಡ್ಡ ಗಾತ್ರದ ವಾಹನ ತಿರುಗಿಸುವಾಗ ಈ ಅಪಘಾತ ನಡೆದಿರುವುದಾಗಿ ತಿಳಿದು ಬಂದಿದ್ದು ಕಾರಿನವರ ವಿವರ ಸದ್ಯ ಲಭಿಸಿಲ್ಲ.

 

 

 

 


 

Continue Reading
Click to comment

Leave a Reply

Your email address will not be published. Required fields are marked *

Advertisement