ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಜಾತ್ಯಾತೀತ ನಾಯಕನಿಗೆ ಒಲಿಯಲಿದೆಯೇ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ..?ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜಗದೀಶ್ ಕಜೆ ಕಣದಲ್ಲಿ…

Published

on

ರಾಷ್ಟ್ರೀಯ ವಿದ್ಯಾರ್ಥಿ ಸಂಘ NSUI ತಾಲೂಕು ಪ್ರತಿನಿಧಿಯಾಗಿ 2011 ರಲ್ಲಿ ಅಂದಿನ nsui ಅಧ್ಯಕ್ಷ ಹರ್ಷದ್ ದರ್ಬೆಯಿಂದ ನೇಮಕ.

2017 ರಲ್ಲಿ ಇಂಟಕ್ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಲೂಕ್ಮಾನ್. ಬಂಟ್ವಾಳ ಅದ್ಯಕ್ಷತೆಯಲ್ಲಿ
ಯುವ ಕಾಂಗ್ರೆಸ್ ದ. ಕ ಜಿಲ್ಲಾ ಕಾರ್ಯದರ್ಶಿಯಾಗಿ 2021 ರಲ್ಲಿ ನೇಮಕ…2003 ರಿಂದಲೇ ಡಾ ರಘು ಬೆಳ್ಳಿಪ್ಪಾಡಿ ಜೊತೆ ಸುಳ್ಯ ಪುತ್ತೂರು ಬಂಟ್ವಾಳ ಮೂಡಬಿದ್ರೆ ಕಾಪು ಸೇರಿದಂತೆ ಹಲವು ಕಡೆ ನಡೆದ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಅಲ್ಲದೆ ಕೇರಳದ ಕಾಸರಗೋಡು, ಉದುಮ ಮಂಜೇಶ್ವರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ..

 

ದಲಿತ ಸಮುದಾಯದ ಅತ್ಯಂತ ಪ್ರಭಾವಿ ಯುವ ನಾಯಕನಾಗಿ ಗುರುತಿಸಿಕೊಂಡಿರುವ ಜಗದೀಶ್ ಕಜೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪದಾಧಿಕಾರಿಯಾಗಿದ್ದು ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದ ಕಜೆ ಪರ ಈಗಾಗಲೇ ಸ್ವಯಂಪ್ರೇರಿತರಾಗಿ ಹಲವಾರು ನಾಯಕರು ಯುವ ಸಮುದಾಯವನ್ನು ಭೇಟಿಯಾಗುತ್ತಿದ್ದು ರಹಸ್ಯ ಮತಭೇಟೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಜೊತೆ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವನ್ನು ಹೊಂದಿದ್ದಾರೆ.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಗದೀಶ್ ಕಜೆ. ಎಪಿಎಂಸಿ ಸದಸ್ಯರು ಮಾಜಿ NSUI ರಾಜ್ಯ ಕಾರ್ಯದರ್ಶಿ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ರವರ ಶಿಷ್ಯ. ಕಳೆದ ಕೋಡಿಂಬಾಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋಲು ಅನುಭವಿಸಿದರು ಸದ್ರಿ ಗ್ರಾಮದಲ್ಲಿ ಪಕ್ಷದ ಸಂಘಟನೆಯನ್ನು ಮಾಡಿರುತ್ತಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಅಶೋಕ್ ಕುಮಾರ್ ಯವರ ಪರವಾಗಿ ಕ್ಷೇತ್ರದಾದ್ಯಂತ ತಿರುಗಿ ಅವರ ಗೆಲುವಿಗೆ ರಾಜಕಾರಣವನ್ನು ರಾಜಕೀಯವಾಗಿ ಎದುರಿಸಿ ಚಾಣಕ್ಯ ರಾಜಕಾರಣಿ ಜಯಪ್ರಕಾಶ್ ಬದಿನಾರು ಅವರ ಆತ್ಮೀಯ ರಾಗಿ ಕೆಲಸ ಮಾಡಿದಂತಹ ಅನುಭವ ಹೊಂದಿರುತ್ತಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement