Published
4 months agoon
By
Akkare Newsಪುತ್ತೂರಿನ ಪ್ರತಿಷ್ಟಿತ ಚಿನ್ನಾಭರಣ ಮಳಿಗೆಯಾದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್’ ವತಿಯಿಂದ 78 ನೇಯ ಸ್ವಾತಂತ್ರೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ ಎಸ್, ಮುಸ್ತಫಾ ಕಕ್ಕಿಂಜೆ ಮಾತನಾಡಿ ನಮ್ಮ ದೇಶಕ್ಕೆ ಈ ಸ್ವಾತಂತ್ರ್ಯ ಎಂಬುದು ಸವಲತ್ತಾಗಿ ಸಿಕ್ಕಿದ್ದಲ್ಲ ಆಂಗ್ಲರ ಕೈಯಿಂದ ಸವಾಲಾಗಿ ಪಡೆದದ್ದಾಗಿದೆ,
ಆದ್ದರಿಂದ ಸ್ವಾತಂತ್ರ್ಯ ಬರೀ ಹಕ್ಕು ಮಾತ್ರವಲ್ಲ ನಮ್ಮೆಲ್ಲರ ಜವಬ್ದಾರಿಯೂ ಆಗಿದೆ ಎಲ್ಲರು ಅದರ ಗೌರವವನ್ನು ಕಾಪಾಡಿಕೊಂಡು ಬರಬೇಕು, ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಮಾತ್ರ ಅದು ಸಾಧ್ಯ ಎಂದರು.
ಮ್ಯಾನೇಜರ್ ಬಾಬು ವಂದಿಸಿದರು, ಮಾರ್ಕೆಟಿಂಗ್ ಮ್ಯಾನೇಜರ್ ಅಮ್ರಾಝ್ ಕಾರ್ಯಕ್ರಮ ನಿರ್ವಹಿಸಿದರು, ಸಿಬ್ಬಂದಿಗಳು ಪಾಲ್ಗೊಂಡರು.