Published
4 months agoon
By
Akkare Newsಪುತ್ತೂರು: ಪುತ್ತೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆಗಳಿಗೆ ಸಂಬಂಧಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಪುತ್ತೂರು ನಗರ ಠಾಣೆಯಲ್ಲಿ ಸ್ಥಳೀಯ ಧಾರ್ಮಿಕ, ರಾಜಕೀಯ, ಸಂಘಟನೆಯ ಮುಖಂಡರ ತುರ್ತು ಸಭೆ ಮಾಡಿ ಘಟನೆಗಳ ಕುರಿತು ವಿಮರ್ಶೆ ಮಾಡಿದ್ದಾರೆ.
ಆ.23 ರಂದು ಬೆಳಿಗ್ಗೆ ಆಗಮಿಸಿದ ಎಸ್ಪಿಯವರು ಇತ್ತೀಚಿಗಿನ ವಿದ್ಯಾರ್ಥಿಗಳ ಪ್ರಕರಣ,ಆ.22ರಂದು ರಾತ್ರಿ ನಡೆದ ಹಲ್ಲೆ ಪ್ರಕರಣ, ಬೆಳಗ್ಗಿನ ಜಾವ ನಡೆದ ಅಂಗಡಿಗೆ ಬೆಂಕಿ ಬಿದ್ದ ಘಟನೆಗೆ ಸಂಬಂಧಿಸಿ ಮುಖಂಡರ ಜೊತೆ ಚರ್ಚಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರ ನೀಡುವಂತೆ ವಿನಂತಿಸಿದ್ದಾರೆ.