ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಅಪ್ಪೆ ಮಹಿಷಮರ್ದಿನಿ ದೇವೆರೆನ ಕಾರ್ಣಿಕದ ಶಕ್ತಿಗ್ ಒಂಜಿ ಮಲ್ಲ ಸಾಕ್ಷಿಯೇ… ಎನ್ನ ಕಂಡನಿ ಶಾಸಕೆರ್ ಆಯಿನವು: ಸುಮಾ ಅಶೋಕ್ ರೈ 

Published

on

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಥಮ ದಿನವಾದ ಅಕ್ಟೋಬರ್ 15ರಂದು ರಾತ್ರಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆದ ಮಹಿಳಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ನಿ, ಉದ್ಯಮಿ ಸುಮಾ ಅಶೋಕ್ ರೈ ಅವರು ನನ್ನ ಪತಿಯನ್ನು ದೇವಸ್ಥಾನದ 2007ರ ಬ್ರಹ್ಮಕಲಶೋತ್ಸವದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತಾಯಿಯ ಆಶೀರ್ವಾದವೇ ಕಾರಣ. ನಂತರ ನಿರಂತರವಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು, ಸೇವೆಗಳನ್ನು ಮಾಡಿಕೊಂಡು ಬಂದಿರುವುದರಿಂದ ಎರಡನೇ ಸಲ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಸ ಮಾಡುವ ಅವಕಾಶ ಅವರ ಪಾಲಿಗೆ ಸಿಕ್ಕಿತ್ತು . ತಾಯಿ ಮಹಿಷಮರ್ದಿನಿ ದೇವರು ಇದಕ್ಕೆಲ್ಲ ಉತ್ತರವಾಗಿ ನಂತರದ ದಿನಗಳಲ್ಲಿ ನನ್ನ ಪತಿಯನ್ನು ಪುತ್ತೂರಿನ ಶಾಸಕರಾನ್ನಾಗಿ ಮಾಡಿದ್ದಾರೆಂದು ಭಾವಾನತ್ಮಕವಾಗಿ ಹೇಳಿದರು. ಮಹಿಷಮರ್ದಿನಿ ದೇವರ ಕಾರಣಿಕ ಶಕ್ತಿಗೆ ನನ್ನ ಪತಿ ಶಾಸಕರಾಗಿ ಆಯ್ಕೆಯಾಗಿರುವುದೇ ಸಾಕ್ಷಿ ಎಂದು ಸುಮಾ ಅಶೋಕ್ ರೈ ಸ್ಮರಿಸಿದರು.‌

Continue Reading
Click to comment

Leave a Reply

Your email address will not be published. Required fields are marked *

Advertisement