Published
4 months agoon
By
Akkare News
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಮದ್ಯವರ್ಜನಾ ಶಿಬಿರದ ಆಯೋಜನೆ ಎಂದರೆ ಅದೊಂದು ಭಿನ್ನ ವ್ಯವಸ್ಥೆ. ಒಬ್ಬ ವ್ಯಕ್ತಿಯ ಹೊಸ ಜೀವನ ರೂಪಿಸುವ ಪುಣ್ಯಕಾರ್ಯ.ಇಂತಹ ವ್ಯವಸ್ಥೆಯೊಳಗೆ ಕಾರ್ಯಕರ್ತರಾಗಿರುವುದಕ್ಕೆ ನಮಗೆ ಹೆಮ್ಮಿಯಿದೆ ಎಂದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಾಜಿ ನಿರ್ದೇಶಕ ಭಾಸ್ಕರ ಕೋಡಿಂಬಾಳ ಮಾತನಾಡಿ, ಮದ್ಯವರ್ಜನಾ ಶಿಬಿರದ ಶಿಬಿರಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಿದೆ.ನಿಮ್ಮ ಮೇಲೆ ಎಲ್ಲರೂ ನಂಬಿಕೆಯಿರಿಸಿದ್ದಾರೆ ಆ ನಂಬಿಕೆ ಉಳಿಸಿಕೊಳ್ಳುವ ಮಹತ್ವದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ, ಇಲ್ಲಿಯವರೆಗೆ ಶಿಬಿರಾರ್ಥಿಗಳು ಒಂದು ವ್ಯವಸ್ಥೆಯೊಳಗಿದ್ದರು.ಈ ವ್ಯವಸ್ಥೆಯಿಂದ ಹೊರ ಹೋಗುವಾಗ ಕೆಲವೊಂದು ಒತ್ತಡಗಳು ಸಹಜವಾಗಿ ಬರುತ್ತದೆ. ಒತ್ತಡಗಳ ನಿವಾರಣೆಗೆ ಧ್ಯಾನ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸಚಿನ್ ಕುಮಾರ್ ಜೈನ್ ಮಾತನಾಡಿ,ಮದ್ಯವರ್ಜನಾ ಶಿಬಿರವೆಂದರೆ ಅದೊಂದು ಮನಕರಗುವ ಶಿಬಿರ. ಇಲ್ಲಿ ಎಲ್ಲರ ಪ್ರೀತಿದೊರಕಿದೆ.ಶಿಬಿರದ ಆಯೋಜನೆ ಮೂಲಕ ಪುಪ್ಪಾಡಿಯ ಹೆಸರು ಹತ್ತೂರಿನಲ್ಲೂ ಪಸರಿಸುವಂತಾಗಿದೆ. ಕಡಬ ತಾಲೂಕು ಜನಜಾಗೃತಿ ವೇದಿಕೆಯ ಪ್ರಥಮ ಅಧ್ಯಕ್ಷರಾದ ಮಹೇಶ್ ಕೆ.ಸವಣೂರು ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳಾಗುತ್ತಿವೆ.ರಾಜ್ಯದಲ್ಲಿ ಕಡಬ ತಾಲೂಕು ಘಟಕ ಮೊದಲ ಸ್ಥಾನದಲ್ಲಿ ಗುರುತಿಸುವಂತಾಗಲಿ.ಶಿಬಿರದ ಪ್ರಯೋಜನ ಪಡೆದುಕೊಂಡವರು ಜೀವನದಲ್ಲಿ ಯಶಸ್ವಿಯಾಗಬೇಕು.ಸಮಾಜವು ಋಣಾತ್ಮಕ ಗುಣಗಳನ್ನು ಗುರುತಿಸುವ ಬದಲು ಸಕಾರತ್ಮ ಗುಣಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋ.ಯ ದ.ಕ.ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆಯ ಕಡಬ ತಾಲೂಕು ಉಪಾಧ್ಯಕ್ಷ ಸೀತಾರಾಮ ಗೌಡ ಪೊಸವೊಳಿಕೆ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ,ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ,ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್,ಗೋಳಿತೊಟ್ಟು ವಲಯಾಧ್ಯಕ್ಷ ನೋಣಯ್ಯ ಪೂಜಾರಿ, ಶಿಬಿರದ ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಚೇತನ್ ಕುಮಾರ್ ಕೋಡಿಬೈಲು,
ಗ್ರಾಮಾಭಿವೃದ್ದಿ ಯೋಜನೆಯ ಪುಪ್ಪಾಡಿ ಒಕ್ಕೂಟದ ಅಧ್ಯಕ್ಷ ವಿಜಯ ಗೌಡ ಕುಚ್ಚೆಜಾಲು,ಶಿಬಿರದ ಆರೋಗ್ಯ ಸಹಾಯಕಿ ನೇತ್ರಾವತಿ ಮೊದಲಾದವರಿದ್ದರು.
77 ಮಂದಿ ಶಿಬಿರಾರ್ಥಿಗಳು 8 ದಿನಗಳ ಶಿಬಿರದಲ್ಲಿ ಭಾಗವಹಿಸಿದರು.ಬೆಳಿಗ್ಗೆ ಕುಟುಂಬ ದಿನ ನಡೆಯಿತು.
ಪುಟ್ಟಪ್ಪಾಡಿಯಲ್ಲಿ ನವಜೀವನ ಸಮಿತಿಯ ತಾಲೂಕು ಸಮಾವೇಶ-ಸಚಿನ್ ಕುಮಾರ್ ಜೈನ್
ಮದ್ಯವರ್ಜನಾ ಶಿಬಿರದ ಮೂಲಕ ವ್ಯಸನಮುಕ್ತರಾಗಿರುವ ಎಲ್ಲರನ್ನೂ ಸೇರಿಸಿಕೊಂಡು ಕಡಬ ತಾಲೂಕು ಮಟ್ಟದ ನವಜೀವನ ಸಮಿತಿ ಸಮಾವೇಶವನ್ನು ಪುಟ್ಟಪ್ಪಾಡಿಯಲ್ಲಿ ಆಯೋಜನೆ ಮಾಡೋಣ. ಆ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಲಾಗುವುದು ಎಂದು ಸಚಿನ್ ಕುಮಾರ್ ಜೈನ್ ಹೇಳಿದರು.
ಹುಟ್ಟು ಹಬ್ಬ ಆಚರಣೆ
ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸಚಿನ್ ಕುಮಾರ್ ಜೈನ್ ಅವರ ಹುಟ್ಟು ಹಬ್ಬವನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಎಲ್ಲಾ ಗಣ್ಯರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಚಿನ್ ಕುಮಾರ್ ಅವರ ಹೆತ್ತವರಾದ ಮಲ್ಲಿಕಾ ಯುವರಾಜ ಕಡಂಬ ಉಪಸ್ಥಿತರಿದ್ದರು.