Published
4 months agoon
By
Akkare Newsಕಡೇಶಿವಾಲಯ ಸಂಪನ್ಮೂಲ ಕೇಂದ್ರದ ವತಿಯಿಂದ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ 2024-25ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳು, ಕಡೆಶೀವಾಲಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ನಡೆಯಿತು.
ಕಡೆಶೀವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ರಾವ್ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ ಎಸ್.ಡಿ,ಎಂ.ಸಿ. ಅಧ್ಯಕ್ಷ ಹರಿಶ್ಚಂದ್ರ ಎಂ. ಅಧ್ಯಕ್ಷತೆ ವಹಿಸಿದರು.
ಕ್ಲಸ್ಟರ್ ನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಗಳಾಗಿ ಭಾಗವಹಿಸಿದರು.
ತೀರ್ಪುಗಾರರಾಗಿ ಕೆದಿಲ ಕ್ಲಸ್ಟರ್ ವಿವಿಧ ಶಾಲಾ ಶಿಕ್ಷಕರು ಸಹಕರಿಸಿದರು. ಕಡೇಶಿವಾಲಯ ಶಾಲಾ ಶಿಕ್ಷಕ ಶಿಕ್ಷಕಿಯರು, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.
ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೆ ಸ್ವಾಗತಿಸಿ . ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್ ಪ್ರಸ್ತಾಪಿಸಿ. ಶಿಕ್ಷಕಿ ದಿವ್ಯ ವಂದಿಸಿ,ಸಹ ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು ನಿರೂಪಿಸಿದರು.