Published
4 months agoon
By
Akkare Newsಪುತ್ತೂರು: ಯುವಶಕ್ತಿ ಗೆಳೆಯರ ಬಳಗ ವಿನಾಯಕನಗರ ಇದರ ವತಿಯಿಂದ ಕೋಡಿಂಬಾಡಿ ಹಿ.ಪ್ರಾ.ಶಾಲಾ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೆ.1ರಂದು ಬೆಳಿಗ್ಗೆ ನಡೆಯಿತು.
ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಕಾರ್ಯಕ್ರಮ ಉದ್ಘಾಟಿಸಿದರು.
ಗೆಳೆಯರ ಬಳಗದ ಗೌರವಾಧ್ಯಕ್ಷ ರಮೇಶ್ ನಾಯಕ್ ನಿಡ್ಯ, ಶಾಲಾ ಮುಖ್ಯಗುರು ಬಾಲಕೃಷ್ಣ ಎನ್. ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ ಶುಭ ಹಾರೈಸಿದರು.
ದಯಾನಂದ ಪೂಜಾರಿ ಪಲ್ಲತ್ತಾರು ಸ್ವಾಗತಿಸಿ ಸುರೇಶ್ ಶೆಟ್ಟಿ ಬರಮೇಲು ವಂದಿಸಿದರು. ಅಶೋಕ್ ಗೌಡ ದಡಿಕೆತ್ತಾರು ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಸಾಮಾನಿ ಸಂಪಿಗೆದಡಿ, ಶ್ರೀನಿವಾಸ ನಾಯ್ಕ ದಾಸಕೋಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.