Published
4 months agoon
By
Akkare Newsಪುತ್ತೂರು: ಬಿಜೆಪಿ ಸದಸ್ಯತಾ ಅಭಿಯಾನದ ಮಂಗಳೂರು ವಿಭಾಗದ ಹಿಂದುಳಿದ ವರ್ಗಗಳ ಮೋರ್ಚಾದ ಸದಸ್ಯತಾ ಅಭಿಯಾನಕ್ಕೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಆರ್ ಸಿ ನಾರಾಯಣ ಅವರನ್ನು ಮೋರ್ಚಾದ ವಿಭಾಗ ಉಸ್ತುವಾರಿಯಾಗಿ ನಿಯೋಜನೆ ಮಾಡಲಾಗಿದೆ.
ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯಾ ಸೂಚನೆಯಂತೆ ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗದಲ್ಲಿ ಅತೀ ಹೆಚ್ಚು ಜನರನ್ನು ಸದಸ್ಯರಾಗಿ ಮಾಡಿ ಸಂಘಟನೆಗೆ ಬಲ ನೀಡುವಂತೆ ಕಾರ್ಯನಿರ್ವಾಹಿಸಲು ಸೂಚಿಸಿದ್ದಾರೆ.