Published
4 months agoon
By
Akkare Newsಬಂಟ್ವಾಳ : ಅರವೀಪುರದಲ್ಲಿ ನಾರಾಯಣಗುರುಗಳು ಶಿವಾಲಯ ಪ್ರತಿಷ್ಟೆಯ ಮೂಲಕ ಪರಿವರ್ತನೆಗೆ ನಾಂದಿ ಹಾಡಿದರು.
ಜಾತಿ ಕುರಿತಾದ ಆಳವಾದ ಜ್ಞಾನದಿಂದ ಧಾರ್ಮಿಕತೆಯ ತಳಹದಿಯ ಮೇಲೆ ಜೀವ ಸಂಕುಲದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಅಭಿವೃದ್ಧಿ ಶಕೆಯನ್ನು ತನ್ನ ಜೀವಿತಾವಧಿಯಲ್ಲೇ ಸಾಧಿಸಿ ತೋರಿಸಿದ ವಿಶ್ವ ಗುರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದರು.
ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ಮನುಕುಲದ ಗುರುಗಳಾದ ನಾರಾಯಣಗುರುಗಳ ಸ್ಮರಣೆ ಅರ್ಥಪೂರ್ಣವಾಗಿದೆ ಎಂದು ಮಾಜಿ ಅಧ್ಯಕ್ಷ, ಶಿಕ್ಷಕ ಹರೀಶ್ ಎಸ್ ಕೋಟ್ಯಾನ್ ತಿಳಿಸಿದರು
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್, ನಿರ್ದೇಶಕರುಗಳಾದ ಮಹೇಶ್ ಬೊಳ್ಳಾಯಿ,ಉದಯ್ ಮೇನಾಡು,ಹರಿಣಾಕ್ಷಿ ನಾವುರ, ಮಧುಸೂದನ್ ಮಧ್ವ, ಲೋಹಿತ್ ಬಂಟ್ವಾಳ,ಮಾಜಿ ಅಧ್ಯಕ್ಷರಾದ, ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ,
ಶಿವಾನಂದ ಎಂ ಸದಸ್ಯರಾದ ಪ್ರಶಾಂತ್ ಏರಮಲೆ, ಜಗದೀಶ್ ಕಲ್ಲಡ್ಕ, ಶೈಲಜಾ ರಾಜೇಶ್,ರಚನಾ ಕರ್ಕೆರ,ನಳಿನಿ ಮಧ್ವ, ಚಂದ್ರಶೇಖರ್ ಕಲ್ಯಾಣಾಗ್ರಹಾರ, ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಯಶೋಧರ್ ಕಟ್ಟತ್ತಿಲ, ಯತೀಶ್ ಕರ್ಕೇರ, ಹರೀಶ್ ಅಜೆಕಲ, ಸೂರಜ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು,
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.