ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ರಾಜ್ಯಮಟ್ಟದ ಈಜುಸ್ಪರ್ಧೆ: ಫಿಲೋಮಿನಾ ಹಿರಿಯ ಪ್ರಾರ್ಥಮಿಕ ಶಾಲೆಯ ಲಿಖಿತ್ ರಾಮಚಂದ್ರ ರಾಷ್ಟ್ರಮಟ್ಟಕ್ಕೆ

Published

on

 

 

ಪುತ್ತೂರು: ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರದ ವತಿಯಿಂದ ಬೆಂಗಳೂರಿನ ಬಸವನಗುಡಿ ಈಜು ಕೊಳದಲ್ಲಿ ಅ. 16 ಮತ್ತು 17 ರಂದು ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೇಗಳಲ್ಲೊಂದಾದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಲಿಖಿತ್ ರಾಮಚಂದ್ರ ರವರು 2ಬೆಳ್ಳಿ ಮತ್ತು 2 ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮತ್ತು 14 ವರ್ಷ ವಯೋಮಿತಿಯೊಳಗಿನ ಬಾಲಕರ ಫ್ರೀ ಸ್ಟೈಲ್ ರಿಲೇ ತಂಡಕ್ಕೆ ಸಹ ಆಯ್ಕೆಯಾಗಿದ್ದಾರೆ. ಇವರು ಪುತ್ತೂರು ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರು ಆದ ರಾಮಚಂದ್ರ ಎ ಹಾಗೂ ದೀಪಾರಾಣಿ ಯವರ ಪುತ್ರ.

ಇವರು ಡಾ|| ಶಿವರಾಮ ಕಾರಂತ ಬಾಲವನ ಪುತ್ತೂರು ಇಲ್ಲಿನ ಪುತ್ತೂರು ಅಕ್ವಾಟಿಕ್ ಕ್ಲಬ್ ನಲ್ಲಿ ಶ್ರೀಯುತ ಪಾರ್ಥ ವಾರಣಾಸಿ, ಶ್ರೀಯುತ ದೀಕ್ಷಿತ್ ರಾವ್, ಶ್ರೀಯುತ ರೋಹಿತ್ ಹಾಗು ಶ್ರೀಯುತ ನಿರೂಪ್, ರವರಿಂದ ಈಜು ತರಬೇತಿ ಪಡೆಯುತ್ತಿದ್ದಾರೆ

Continue Reading
Click to comment

Leave a Reply

Your email address will not be published. Required fields are marked *

Advertisement