Published
4 months agoon
By
Akkare Newsಪುತ್ತೂರು: ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ 42ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಸೆ.7ರಿಂದ ಸೆ.9ರವರೆಗೆ ಸವಣೂರಿನ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಲಿದ್ದು, ಸೆ. 7 ರಂದು ಪುರೋಹಿತ ಅನಂತರಾಮ ಉಪಾಧ್ಯಾಯರ ನೇತೃತ್ವದಲ್ಲಿ ಗಣೇಶ ಬಿಂಬ ಪ್ರತಿಷ್ಠಾಪನೆ ಮತ್ತು ಧ್ವಜಾರೋಹಣ ಹಾಗೂ 12 ತೆಂಗಿನ ಕಾಯಿ ಗಣಪತಿ ಹೋಮ ನಡೆಯಿತು.
ಪೂರ್ವಹ್ನ ಧ್ವಜಾರೋಹಣವನ್ನು ನಾಟಿ ವೈದ್ಯ ವಾಸುದೇವ ಇಡ್ಯಾಡಿರವರು ನೇರವೇರಿಸಿದರು, ಭಜನಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ರಾಮ ಭಟ್ ಕುಕ್ಕುಜೆ ದೀಪ ಬೆಳಗಿಸಿ, ಉದ್ಘಾಟನೆಗೈದರು.
ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷ ಶಿವರಾಮ ಗೌಡ ಮೆದು,ಕಾರ್ಯದರ್ಶಿ ಸುಧಾಕರ ರೈ ದೇವಸ್ಯ, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಉಪಾಧ್ಯಕ್ಷ ರಾಘವ ಗೌಡ ಸವಣೂರು, ಜೊತೆ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ ನಡುಬೈಲು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.