Published
4 months agoon
By
Akkare Newsಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ ಅಶ್ವತ್ಥಕಟ್ಟೆ ವಠಾರದಲ್ಲಿ ಸೆ.7ರಿಂದ 9ರವರೆಗೆ ನಡೆಯುತ್ತಿರುವ 41ನೇ ವರ್ಷದ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಸೆ.9ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯಿಂದ ನ್ಯೂಸ್ ಅಕ್ಕರೆ ಮಾಧ್ಯಮ ಸಂಸ್ಥೆಯ ವರುಷದ ಹರುಷ ಕಾರ್ಯಕ್ರಮ ಸೇಡಿಯಾಪು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ವೇಳೆ ಪ್ರತಿಭಾ ಪುರಸ್ಕಾರ, ಸನ್ಮಾನ, ಪ್ರಸಿದ್ಧ ಕಲಾವಿದರಿಂದ ಡ್ಯಾನ್ಸ್ ಧಮಾಕ, ರಸಮಂಜರಿ ಹಾಗೂ ವಿವಿಧ ಸಾಂಸ್ಕೃತಿಕ ವೈವಿಧ್ಯ ಜರಗಲಿದೆ.
ಶಾಸಕ ಅಶೋಕ್ ಕುಮಾರ್ ರೈ, ಝೀ ಕನ್ನಡ ಮಹಾನಟಿ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ, ಮೋಡೆಲ್ ನಟ ಸಚಿನ್ ಜೈಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ನ್ಯೂಸ್ ಅಕ್ಕರೆಯ ಮುಖ್ಯಸ್ಥ ಜಯಪ್ರಕಾಶ್ ಬದಿನಾರು ಮತ್ತು ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಪ್ರಕಟಣೆ ತಿಳಿಸಿದೆ.