Published
3 months agoon
By
Akkare Newsಸುಬ್ರಹ್ಮಣ್ಯ ಸಮೀಪದ ತೋಡಿನಲ್ಲಿ ಭಾರೀ ಪ್ರಮಾಣ ನೀರು:ಹೆದ್ದಾರಿಗೆ ನುಗ್ಗಿ ಸೇತುವೆ ಮುಳುಗಡೆ
ಸುಬ್ರಹ್ಮಣ್ಯ ಸಮೀಪದ ಕೈಕಂಬದ ಹೊಳೆಯಲ್ಲಿ ಹರಿದ ನೀರು ಸುಬ್ರಹ್ಮಣ್ಯ – ಧರ್ಮಸ್ಥಳ ಹೆದ್ದಾರಿಯ ಚೇರು ಎಂಬಲ್ಲಿ ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ತೊಡಕುಂಟಾಗಿದೆ.
ಕಡಬ – ಸುಬ್ರಹ್ಮಣ್ಯ ಹೆದ್ದಾರಿಯ ಕೈಕಂಬ ಸೇತುವೆಯೂ ಸ್ವಲ್ಪ ಹೊತ್ತು ಮುಳುಗಡೆಗೊಂಡ ಪರಿಣಾಮ ಕೆಲವು ತಾಸು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸುಳ್ಯ ಭಾಗದಲ್ಲೂ ಶನಿವಾರ, ರವಿವಾರ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು- ಕಲ್ಮಕಾರು ಸಂಪರ್ಕ ರಸ್ತೆಯ ಗಡಿಕಲ್ಲಿನಲ್ಲಿ ರಸ್ತೆ ಬದಿಯ ತೋಡಿನ ಭಾಗದಲ್ಲಿ ಮಣ್ಣು ಕುಸಿದಿರುವ ಕಾರಣ ಘನ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಘನ ವಾಹನ ಸಂಚಾರ ನಿರ್ಬಂಧಿಸಿದ ಕಾರಣ ಕಲ್ಮಕಾರು ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚರಿಸಲಾಗದೆ ಆ ಭಾಗದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ.