Published
3 months agoon
By
Akkare News
ಮಕ್ಕಳ ಗಂಭೀರವಾದ ಸಮಸ್ಯೆಯನ್ನು ಅರ್ಥೈಸಿಕೊಂಡು, ಅವರ ವಿದ್ಯಾಭ್ಯಾಸಕ್ಕೆ ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ಮೂರು ದಿನಗಳಲ್ಲಿ ಬಸ್ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಆಶ್ವಾಸನೆಯನ್ನು ನೀಡಿರುತ್ತಾರೆ.ಅಂದು ಈಶ್ವರಮಂಗಲ ಆಸುಪಾಸಿನ ಕೆಲವರು ಜೊತೆಗೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಇವರು ಉಪಸ್ಥಿತರಿದ್ದರು.
ಇಷ್ಟೇ ಅಲ್ಲದೆ ವಿದ್ಯಾರ್ಥಿಗಳನ್ನು ಸದಾ ಪ್ರೋತ್ಸಾಹಿಸುತ್ತಾ ಚಂದ್ರಹಾಸ ಈಶ್ವರಮಂಗಲ ಇವರು ಕೂಡ ವಿದ್ಯಾರ್ಥಿಗಳೊಂದಿಗಿದ್ದರು.ಈ ರೀತಿ ಎಡೆ ಬಿಡದೆ ನಡೆಸಿದ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಇಂದು ಈಶ್ವರಮಂಗಲ ಗ್ರಾಮಕ್ಕೆ ಬಸ್ ಬಂದಿದೆ. ಇಂದು ಹಲವು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಕೂಡ ಭಾಗಿಯಾದರು.ಇಂದು ಶಾಸಕರು ಪುತ್ತೂರಿನ ಜನಪ್ರಿಯ ಶಾಸಕ ಮಾತ್ರವಲ್ಲದೆ ವಿದ್ಯಾರ್ಥಿಗಳ ನೆಚ್ಚಿನ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರವಾದರು.