Published
3 months agoon
By
Akkare Newsಬೆಳ್ಳಾರೆ, ಸೆ. 10. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಗೃಹರಕ್ಷಕರಾದ ಸಮಾಧೇಷ್ಟ ಡಾ. ಮುರಲೀಮೋಹನ್ ಚೂಂತಾರುರವರಿಗೆ ಬೆಳ್ಳಾರೆ ಗೃಹರಕ್ಷಕರಿಂದ ಸನ್ಮಾನ ಕಾರ್ಯಲ್ರಮವು ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು, ಹುಟ್ಟೂರಿನಲ್ಲಿ ಪಡೆದ ಸನ್ಮಾನ ರಾಷ್ಟ್ರ ಪ್ರಶಸ್ತಿ ಪಡೆದದ್ದಕೆ ಸಮಾನ. ವೈದ್ಯಕೀಯ ವೃತ್ತಿಯ ಜೊತೆಜೊತೆಗೆ ನಿರಂತರ ಬರಹಗಳನ್ನು ಬರೆಯುತ್ತಾ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿರುವುದು ಇವರ ವಿಶೇಷತೆ ಎಂದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪತಿ ಪದಕ ಪುರಸ್ಕೃತ ದ.ಕ. ಜಿಲ್ಲಾ ಹೋಮ್ ಗಾರ್ಡ್ ಸಮಾಧೇಷ್ಟರಾದ ಡಾ. ಮುರಲೀಮೋಹನ್ ಮಾತನಾಡಿ, ಬೆಳ್ಳಾರೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆದಿದೆ. ಎಲ್ಲಾ ಸ್ಥರಗಳಲ್ಲಿ ಗೃಹರಕ್ಷಕರು ಮಾಡಿದ ಉತ್ತಮ ಸೇವೆಯಿಂದ ನನಗೆ ಗೌರವ ಸಿಕ್ಕಿದೆ.
ನಿಷ್ಕಾಮ ಸೇವೆ ನೀಡಿರುವ ನಿಮಗೆ ನನ್ನ ಪದಕ, ಪ್ರಶಸ್ತಿಗಳನ್ನು ಅರ್ಪಿಸುತ್ತೇನೆ. ಮುಂದೆಯೂ ಗೃಹರಕ್ಷಕ ದಳದ ಧ್ಯೇಯ ವಾಕ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದರು. ವೇದಿಕೆಯಲ್ಲಿ ಬೆಳ್ಳಾರೆ ಜೇಸೀಸ್ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಉಪಸ್ಥಿತರಿದ್ದರು. ಬೆಳ್ಳಾರೆ ಗೃಹರಕ್ಷಕ ದಳದ ಘಟಕಾಧಿಕಾರಿ ವೀರನಾಥನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬೆಳ್ಳಾರೆ ಘಟಕದ ಗೃಹರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.